ವಾಷಿಂಗ್ಟನ್: ಗಾಝಾದಿಂದ ಫೆಲೆಸ್ತೀನೀಯರನ್ನು ಸ್ಥಳಾಂತರಿಸುವ ಡೊನಾಲ್ಡ್ ಟ್ರಂಪ್ ಅವರ ಪರಿಕಲ್ಪನೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
`ಇದು ನಿಜಕ್ಕೂ ಗಮನಾರ್ಹವಾದ ವಿಚಾರ ಮತ್ತು ಖಂಡಿತಾ ಇದನ್ನು ಜಾರಿಗೊಳಿಸಬೇಕಿದೆ. ಏಕೆಂದರೆ ಇದು ಎಲ್ಲರಿಗೂ ವಿಭಿನ್ನ ಭವಿಷ್ಯವನ್ನು ಸೃಷ್ಟಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಗಾಝಾದಿಂದ ನಿರ್ಗಮಿಸಲು ಬಯಸುವ ನಿವಾಸಿಗಳಿಗೆ ನಿರ್ಗಮಿಸಲು ಅವಕಾಶ ನೀಡುವ ವಿಚಾರದಲ್ಲಿ ಏನು ತಪ್ಪಿದೆ? ಅವರು ನಿರ್ಗಮಿಸಬಹುದು. ಆ ಬಳಿಕ ಹಿಂತಿರುಗಿ ಬರಬಹುದು. ಸ್ಥಳಾಂತರಗೊಳ್ಳಬಹುದು ಮತ್ತು ಮರಳಿ ಬರಬಹುದು. ಆದರೆ ಗಾಝಾವನ್ನು ಪುನನಿರ್ಮಿಸಬೇಕಿದೆ’ ಎಂದು ನೆತನ್ಯಾಹು ಹೇಳಿದ್ದಾರೆ.