ಅಬುಜ: ವಾಯವ್ಯ ನೈಜೀರಿಯಾದ ಇಸ್ಲಾಮಿಕ್ ಶಾಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಕನಿಷ್ಠ 17 ಮಕ್ಕಳು ಮೃತಪಟ್ಟಿರುವುದಾಗಿ ದೇಶದ ತುರ್ತು ಕಾರ್ಯಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಝಂಪಾರ ರಾಜ್ಯದ ಕವೂರ ನಮೋಡ ಜಿಲ್ಲೆಯಲ್ಲಿನ ಶಾಲೆಯಲ್ಲಿ ದುರಂತ ಸಂಭವಿಸಿದಾಗ ಶಾಲೆಯಲ್ಲಿ ಸುಮಾರು 100 ಮಕ್ಕಳಿದ್ದರು. ಕನಿಷ್ಠ 17 ಮಂದಿ ಸಾವನ್ನಪ್ಪಿದ್ದು ಇತರ 18 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಹೇಳಿದ್ದಾರೆ.
ಬೆಂಕಿ ದುರಂತಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ ಬಾಯಿಯ ನೈರ್ಮಲ್ಯಕ್ಕೆ ಬಳಸುವ, ಸ್ಥಳೀಯವಾಗಿ `ಕರ’ ಎಂದು ಕರೆಯಲಾಗುವ ಮರದ ಕಡ್ಡಿಗಳನ್ನು ಶಾಲೆಯ ಆವರಣದಲ್ಲಿ ರಾಶಿ ಹಾಕಲಾಗಿತ್ತು. ಅದರಿಂದ ಬೆಂಕಿ ಹರಡಿದ್ದು ಇಡೀ ಶಾಲೆಗೆ ವ್ಯಾಪಿಸಿದೆ ಎನ್ನಲಾಗುತ್ತಿದೆ.