ಮಾಸ್ಕೋ: ರಷ್ಯಾದ ಮಹಾತ್ವಾಕಾಂಕ್ಷಯೆ ಚಂದ್ರಯಾನ ವಿಫಲಗೊಂಡಿದ್ದು ಇದರಿಂದ ರಷ್ಯಾ ವ್ಯಾಪಕ ಟೀಕೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ರಶ್ಯದ ಬಾಹ್ಯಾಕಾಶ ಏಜೆನ್ಸಿ ಮುಖ್ಯಸ್ಥ ಯೂರಿ ಬೊರಿಸೋವ್ರನ್ನು ವಜಾಗೊಳಿಸಿರುವುದಾಗಿ ಅಧ್ಯಕ್ಷರ ವಕ್ತಾರರು ಹೇಳಿದ್ದಾರೆ.
2022ರ ಜುಲೈಯಿಂದ ರಶ್ಯ ಬಾಹ್ಯಾಕಾಶ ಏಜೆನ್ಸಿ ರೊಸ್ಕೋಸ್ಮಸ್ನ ಮುಖ್ಯಸ್ಥರಾಗಿರುವ ಯೂರಿ ಬೊರಿಸೋವ್ರನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಅವರ ಜಾಗಕ್ಕೆ ಸಹಾಯಕ ಸಾರಿಗೆ ಸಚಿವ ಡಿಮಿಟ್ರಿ ಬಕನೋವ್ರನ್ನು ಅವರನ್ನು ನೇಮಕ ಮಾಡಲಾಗಿದೆ.
1961ರಲ್ಲಿ ಸೋವಿಯತ್ ಗಗನಯಾತ್ರಿ ಯೂರಿ ಗಗಾರಿನ್ ಬಾಹ್ಯಾಕಾಶಕ್ಕೆ ಹೋದ ಮೊದಲ ವ್ಯಕ್ತಿ ಎಂಬ ದಾಖಲೆ ಬರೆದಾಗಿನಿಂದ ಬಾಹ್ಯಾಕಾಶ ಪರಿಶೋಧನೆಯಲ್ಲಿ ರಶ್ಯ ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ 2023ರಲ್ಲಿ ಮಾನವ ರಹಿತ ಚಂದ್ರಯಾನ ಯೋಜನೆಯಲ್ಲಿ ರಶ್ಯದ ಬಾಹ್ಯಾಕಾಶ ನೌಕೆ ಚಂದ್ರನಲ್ಲಿ ಇಳಿಯಲು ಪ್ರಯತ್ನಿಸಿದಾಗ ಚಂದ್ರನ ಮೇಲ್ಮೈಗೆ ಅಪ್ಪಳಿಸಿದ್ದರಿಂದ ಯೋಜನೆ ವಿಫಲಗೊಂಡಿತ್ತು. ಇದರಿಂದ ರಷ್ಯಾ ತೀವ್ರ ಟೀಕೆಗೆ ಗುರಿಯಾಗಿದ್ದು ಈ ಹಿನ್ನೆಲೆಯಲ್ಲಿ ಯೂರಿ ಅವರನ್ನು ತಮ್ಮ ಸ್ಥಾನದಿಂದ ವಜಾಗೊಳಿಸಲಾಗಿದೆ.