ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಇತ್ತೀಚೆಗೆ ಹೆಚ್ಚುತ್ತಲೆ ಇದೆ. ಈ ಬಗ್ಗೆ ಮಹಿಳೆಯರ ರಕ್ಷಣೆಗೆ ಹಲವು ಕಮಿಟಿಗಳನ್ನು ರಚನೆ ಮಾಡಿದ್ದರು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮಾತ್ರ ನಿಂತಿಲ್ಲ. ಸಾಕಷ್ಟು ನಾಯಕಿಯರು ತಮಗಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದು ಇದೆ. ಇದೀಗ ‘ಪುಷ್ಪ 2’ ನಟಿ ಅನಸೂಯ ಭಾರಧ್ವಾಜ್ ಹೀರೋ ಹಾಗೂ ನಿರ್ದೇಶಕರೊಬ್ಬರು ಕಮಿಟ್ಮೆಂಟ್ ಕೇಳಿದ್ದು ಅದಕ್ಕೆ ತಾವು ಒಪ್ಪದಿದ್ದಕ್ಕೆ ಸಿನಿಮಾಗಳ ಆಫರ್ ಕಮ್ಮಿಯಾಯ್ತು ಎಂಬುದನ್ನು ರಿವೀಲ್ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ಚಿತ್ರರಂಗದ ಸ್ಟಾರ್ ನಾಯಕನೊಬ್ಬ ತನ್ನಿಂದ ಕಮಿಟ್ಮೆಂಟ್ ಕೇಳಿದ್ದರ ಬಗ್ಗೆ ಹಂಚಿಕೊಂಡಿದ್ದಾರೆ. ಜೊತೆಗೆ ನಿರ್ದೇಶಕನೊಬ್ಬ ಕಮಿಟ್ಮೆಂಟ್ ಒಪ್ಪಿದರೆ ಸಿನಿಮಾ ಅವಕಾಶ ಕೊಡೊದಾಗಿ ಹೇಳಿದ್ದರು. ಅದನ್ನು ನಾನು ತಿರಸ್ಕಾರ ಮಾಡಿದಕ್ಕೆ ನನಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದೆ ಎಂದಿದ್ದಾರೆ.
ಈ ಕ್ಷೇತ್ರದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಕಮಿಟ್ಮೆಂಟ್ಗೆ ನೋ ಎಂದು ಹೇಳುವ ಧೈರ್ಯವಿರಬೇಕು ಎಂದು ನಟಿ ಹೇಳಿದ್ದು ತಮಗೆ ಕಮಿಟ್ಮೆಂಟ್ಗೆ ಕರೆದ ಆ ಹೀರೋ ಮತ್ತು ನಿರ್ದೇಶಕ ಯಾರು ಎಂಬುದು ಮಾತ್ರ ನಟಿ ರಿವೀಲ್ ಮಾಡಿಲ್ಲ.