ಬಿಗ್ ಬಾಸ್ ಸೀಸನ್ ೧೧ರಲ್ಲಿ ಭಾಗವಹಿಸಿದ್ದ ವಿನಯ್ ಗೌಡ ಅಲ್ಲಿಂದ ಹೊರ ಬಂದ ಬಳಿಕ ಮತ್ತಷ್ಟು ಖ್ಯಾತಿ ಘಳಿಸಿದ್ದಾರೆ. ಅವರನ್ನು ಅರಸಿಕೊಂಡು ಹಲವು ಸಿನಿಮಾ ಟೀಂಗಳು ಬರುತ್ತಿವೆ. ಇದೀಗ ವಿನಯ್ ಗೌಡ ಹೊಸ ಸಿನಿಮಾದ ಅಪ್ಡೇಟ್ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ವಿನೋದ್ ಪ್ರಭಾಕರ್ ನಟನೆಯ ಬಲರಾಮ ಸಿನಿಮಾದಲ್ಲಿ ವಿನಯ್ ಗೌಡ ಖಡಕ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ವಿನಯ್ ಪಾತ್ರದ ಪೋಸ್ಟರ್ ರಿಲೀಸ್ ಆಗಿದ್ದು ಸಿನಿಮಾದಲ್ಲಿ ಅವರ ಪಾತ್ರದ ಲುಕ್ ಹೇಗಿರಲಿದೆ ಎಂಬುದು ಅನಾವರಣ ಆಗಿದೆ.
ಬನಿಯನ್ ಧರಿಸಿ, ಮೇಲೊಂದು ಶರ್ಟ್, ಕುತ್ತಿಗೆಯಲ್ಲಿ ಎರಡು ಚಿನ್ನದ ಚೈನ್, ಕೈಬೆರಳಲ್ಲಿ ಉಂಗುರಗಳು, ಉದ್ದವಾದ ಕೂದಲು, ಕೈಯಲ್ಲಿ ಚಾಕು ಹಿಡಿದು ವಿನಯ್ ಗೌಡ ಪೋಸ್ ಕೊಟ್ಟಿದ್ದಾರೆ. ಸದ್ಯ ವಿನಯ್ ಗೌಡ ಲುಕ್ ವೈರಲ್ ಆಗುತ್ತಿದೆ. ವಿನಯ್ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಇನ್ನೂ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದಲ್ಲೂ ಅವರಿಗೆ ಅವಕಾಶ ಸಿಕ್ಕಿದೆ. ಸಿನಿಮಾ ಶೂಟಿಂಗ್ ಅವರು ಎದುರು ನೋಡ್ತಿದ್ದಾರೆ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸುಮಾರು ೭ ತಿಂಗಳ ಕಾಲ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರ ಬಂದಿರುವ ದರ್ಶನ್ ಸದ್ಯದ ಮಟ್ಟಿಗೆ ಶೂಟಿಂಗ್ ಗೆ ಬ್ರೇಕ್ ಹಾಕಿದ್ದಾರೆ.