ಇಸ್ಲಾಮಾಬಾದ್: ಕಾಶ್ಮೀರ ಸೇರಿದಂತೆ ಭಾರತದ ಜತೆಗಿನ ಎಲ್ಲ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪಾಕಿಸ್ತಾನ ಬಯಸಿದೆ ಎಂದು ಅಲ್ಲಿನ ಪ್ರಧಾನಿ ಶೆಹಬೆಝ್ ಶರೀಫ್ ಹೇಳಿದ್ದಾರೆ.
ಕಾಶ್ಮೀರ ಐಕ್ಯಮತ್ಯ ದಿನಾಚರಣೆ ಅಂಗಾಗಿ ಮುಜಾಫರಾಬಾದ್ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಮಾತನಾಡಿದ ಅವರು, ವಿಶ್ವಸಂಸ್ಥೆಗೆ ಭಾರತ ನೀಡಿರುವ ಭರವಸೆಗಳನ್ನು ಈಡೇರಿಸಿ ಮಾತುಕತೆ ಆರಂಭಿಸಬೇಕು ಎಂದು ಹೇಳಿದ್ದಾರೆ.
ಕಾಶ್ಮೀರಿಗಳಿಗೆ ಬೆಂಬಲ ವ್ಯಕ್ತಪಡಿಸಲು ಪ್ರತಿ ವರ್ಷ ಕಾಶ್ಮೀರ ಐಕ್ಯಮತ್ಯ ದಿನವನ್ನು ಹಮ್ಮಿಕೊಳ್ಳಲಾಗುತ್ತಿದೆ. “ಮಾತುಕತೆಯ ಮೂಲಕ ಕಾಶ್ಮೀರ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಾವು ಬಯಸಿದ್ದೇವೆ” ಎಂದಿದ್ದಾರೆ.