ಮಂಡ್ಯ : ಪಕ್ಷದಲ್ಲಿ ನಡೆಯುತ್ತಿರುವ ಘಟನೆ ಬೇಸರ ತಂದಿದೆ, ಗುಂಪುಗಾರಿಕೆ, ಎರಡೂ ಬಣ ಮಾಡಿರೋದು ಒಳ್ಳೆಯದಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ವೈ ಬೆಂಬಲಿಗರಿಂದ ಬೆಂಗಳೂರಿನಲ್ಲಿ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದರು. ನಾನು ಈ ಪಾರ್ಟಿಗೆ ಬಂದು 50 ವರ್ಷ ಆಗಿದೆ. ಎಮರ್ಜೆನ್ಸಿಯಲ್ಲಿ ಜೈಲಿನಲ್ಲಿದ್ದೆ, ನಾನು ಚಿಕ್ಕಪ್ಪ, ತಮ್ಮ ಎಲ್ಲರೂ ಜೈಲಿನಲ್ಲಿದ್ದೊ. ನಾವು ಹೋರಾಟ ಮಾಡಿಕೊಂಡು ಬಂದವರು. ಒಂದೇ ಬಾರಿ ಲೀಡರ್ ಆಗಿಲ್ಲ, ಹಂತ ಹಂತವಾಗಿ ಬಂದವನು ಬೆಂಗಳೂರಲ್ಲಿ ಏನು ಇರಲಿಲ್ಲ, ನಾನು ಅನಂತ್ ಕುಮಾರ್ ಪಾರ್ಟಿ ಕಟ್ಟಿದ್ದೇವೆ. ಹಳೆ ಮೈಸೂರಿನಲ್ಲೂ ಹೋರಾಟ ಮಾಡಿದ್ದೇವೆ. ಆದರೆ ಇವಾಗ ನಡೆಯುತ್ತಿರುವ ಘಟನೆ ಬೇಸರ ತಂದಿದೆ ಗುಂಪುಗಾರಿಕೆ ಎರಡೂ ಬಣ ಮಾಡಿರೋದು ಒಳ್ಳೆಯದಲ್ಲ ಎಲ್ಲಾ ಸರಿಯಾಗಬೇಕು. ವಿರೋಧ ಪಕ್ಷವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡೋದು ನಮ್ಮ ಕರ್ತವ್ಯ. ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾದ್ರೆ ಪಾರ್ಟಿ ಒಗ್ಗಟ್ಟಾಗಿರಬೇಕು ಎಂದರು.
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಮೂರು ವರ್ಷಕ್ಕೆ ಒಂದು ಬಾರಿ ಚುನಾವಣೆ ಆಗಬೇಕು. ರಾಷ್ಟ್ರೀಯ ಅಧ್ಯಕ್ಷರೇ ಬದಲಾಗುತ್ತಾರೆ. ರಾಜ್ಯಾಧ್ಯಕ್ಷದ ಬದಲಾವಣೆ ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು, ಅಧ್ಯಕ್ಷರಾಗಬೇಕು ಅನ್ನೋದು ಎಲ್ಲರಿಗೂ ಆಸೆ ಇರುತ್ತೆ. ಅದನ್ನೆಲ್ಲ ಅಮಿತ್ ಶಾ ತೀರ್ಮಾನ ಮಾಡ್ತಾರೆ. ಯತ್ನಾಳ ಕೂಡ ಬಿಜೆಪಿ ನಾಯಕರೇ, ವಿಜಯೇಂದ್ರ ಅವರು ಬಿಜೆಪಿ ನಾಯಕರೇ ತೀರ್ಮಾನ ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು ಎಂದರು.
ಇನ್ನೂ, ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಮಾತನಾಡಿ, ನಾನು ಜ್ಯೋತಿಷಿ ಅಲ್ಲ, ಆದರೆ ನವೆಂಬರ್ ನಲ್ಲಿ ಸಿಎಂ ಬದಲಾವಣೆ ಆಗೋದು ಸತಸಿದ್ದ. ನಾನು ಈಗಾಗಲೇ ಸಿಎಂ ಬದಲಾವಣೆ ಬಗ್ಗೆ ಹೇಳಿದ್ದೇನೆ. ನಾನು ಜ್ಯೋತಿಷ್ಯದ ಗಿರಾಕಿ ಅಲ್ಲ ಡಿಕೆ ಶಿವಕುಮಾರ್, ಪರಮೇಶ್ವರ್ ಜ್ಯೋತಿಷ್ಯ ಕೇಳ್ತಾರೆ. ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದೆ. ನಮಗು ಎಲ್ಲಾ ಕಡೆ ಲಿಂಕ್ ಇರುತ್ತೆ. ಡೆಲ್ಲಿ ಲಿಂಕ್ ಇದೆ. ಆದರೆ ಸಿಎಂ ಚೇರ್ ಯಾರಿಗೆ ಸಿಗುತ್ತೋ ಗೊತ್ತಿಲ್ಲ ಎಂದರು.