ಬೆಂಗಳೂರು:- ನಾನು ಯಾವತ್ತೂ ಹೊಂದಾಣಿಕೆ ರಾಜಕಾರಣ ಮಾಡಿದವನಲ್ಲ ಎಂದು ಬಿಲ್ ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಯಾವತ್ತೂ ಹೊಂದಾಣಿಕೆ ರಾಜಕಾರಣ ಮಾಡಿದವನಲ್ಲ, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದಾರಾಮಯ್ಯ ಅವರ ವಿರುದ್ಧ ಬೆಂಗಳೂರುನಿಂದ ಮೈಸೂರಿಗೆ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮಾಡಿ ಸರ್ಕಾರವನ್ನು ಒಂಟಿಗಾಲಲ್ಲಿ ನಿಲ್ಲುವಂತೆ ಮಾಡಿದ್ದೇನೆ ಎಂದರು.
ಕ್ರಿಸ್ ಗೇಲ್ ವಿಶ್ವ ದಾಖಲೆಗೆ ಕುತ್ತು: ದಾಖಲೆ ಮುರಿಯೋ ಸನಿಹದಲ್ಲಿ ಇಂಗ್ಲೆಂಡ್ ಬ್ಯಾಟರ್!
ರಾಜ್ಯಾಧ್ಯಕ್ಷ ಆದಾಗಿನಿಂದ ಒಂದು ದಿನವೂ ಮನೆಯಲ್ಲಿ ಕೂರದೆ ಸರ್ಕಾರದ ವಿರುದ್ಧ ನಡೆಸಿದ ಹೋರಾಟ ಮತ್ತು ಪಕ್ಷದ ಸಂಘಟನೆಗಾಗಿ ರಾಜ್ಯದಾದ್ಯಂತ ಸುತ್ತಾಡಿದ ಪರಿಣಾಮವೇ ಸಂಘಟನೆ ವಿಷಯದಲ್ಲಿ ಕರ್ನಾಟಕವು ದೇಶದಲ್ಲಿ 4 ನೇ ಸ್ಥಾನದಲ್ಲಿದೆ ಎಂದು ವಿಜಯೇಂದ್ರ ಹೇಳಿದರು.
ಇದೇ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವ ವಿಕ್ಸಿತ್ ಭಾರತ್ ಆಶಯಕ್ಕೆ ಪೂರಕವಾದ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದರು. ₹ 12ಲಕ್ಷ ವಾರ್ಷಿಕ ಆದಾಯ ಇರುವವರು ಯಾವುದೇ ತೆರಿಗೆ ಕಟ್ಟಬೇಕಿರದ ಯೋಜನೆಯನ್ನು ಅವರು ಜಾರಿಗೆ ತಂದಿರೋದು ಶ್ಲಾಘನೀಯ. ಅವರು ಮಂಡಿಸಿರುವ ಬಜೆಟ್ ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗೆ ಬಹಳ ಅನುಕೂಲವಾಗಲಿದೆ ಎಂದು ವಿಜಯೇಂದ್ರ ಹೇಳಿದರು. ಸಿಎಂ ಸಿದ್ದರಾಮಯ್ಯ ಬಜೆಟ್ ಬಗ್ಗೆ ನೀಡಿದ ಪ್ರತಿಕ್ರಿಯೆ ಗಮನಿಸಿದೆ, ಅವರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದು ವಿಜಯೇಂದ್ರ ಹೇಳಿದರು.
ರಾಜ್ಯದ ಅಧ್ಯಕ್ಷರ ಚುನಾವಣೆ ಆಯ್ಕೆ ಪ್ರಕ್ರಿಯೆ ಯಾವುದೇ ಸಮಯದಲ್ಲಿ ಬೇಕಾದ್ರು ನಡೆಯಬಹುದು. 20ನೇ ತಾರೀಖಿನ ಒಳಗೆ ಎಲ್ಲವೂ ಮುಗಿಯುತ್ತೆ ಅನ್ನೋ ಮಾಹಿತಿಗಳು ಬರ್ತಿವೆ. ಪಕ್ಷದ ಆಂತರಿಕ ಭಿನ್ನಮತ 20ನೇ ತಾರೀಖಿನ ಒಳಗೆ ಮುಗಿದು ಹೋಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಅವರು ಮಹತ್ವದ ಮಾಹಿತಿಯನ್ನ ತಿಳಿಸಿದ್ದಾರೆ
ಹಲವರು ನನ್ನ ಬಗ್ಗೆ ಪಕ್ಷದ ಬಗ್ಗೆ ನಾನಾ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದ ಅಧ್ಯಕ್ಷನಾಗಿ ನಾನು ಹೇಳಿಕೆ ಕೊಟ್ರೆ ಸರಿಯಲ್ಲ, ಕಾರ್ಯಕರ್ತರಿಗೂ ನೋವಾಗುತ್ತೆ ಅದಕ್ಕೆ ಮಾತಾಡ್ತಿಲ್ಲ. ಶ್ರೀ ರಾಮುಲು ಅವರು ನನಗೆ ಅನುಭವ ಇಲ್ಲ ಅಂತ ಹೇಳಿದ್ದಾರೆ. ರಾಜ್ಯದ ಅಧ್ಯಕ್ಷನಾಗಿ ನನಗೆ ಅನುಭವ ಇಲ್ಲದೆ ಇರಬಹುದು. ಆದರೆ, ಪಕ್ಷದ ಕಾರ್ಯಕರ್ತನಾಗಿ ನನಗೆ ಅನುಭವ ಇದೆ. ಪಕ್ಷದ ಕಾರ್ಯದರ್ಶಿಯಾಗಿ, ಯುವಮೋರ್ಚಾ ಅಧ್ಯಕ್ಷನಾಗಿ, ಪಕ್ಷದ ಉಪಾಧ್ಯಕ್ಷನಾಗಿ ನನಗೆ ಅನುಭವ ಇದೆ. ನಮ್ಮ ಕಾರ್ಯಕರ್ತರು ನನ್ನನ್ನು ಪ್ರಿತಿಯಿಂದ ವಿಜಯಣ್ಣ ಅಂತಾ ಕರೀತಾರೆ ಎಂದು ಹೇಳಿದರು.