ಬೆಂಗಳೂರು:- ಎಲ್ಲಾ ಅಂದುಕೊಂಡ ಹಾಗೆ ಆಗಿದ್ರೆ ಕೆಲವೇ ದಿನಗಳಲ್ಲಿ ಗೃಹ ಪ್ರವೇಶ ಮಾಡಿ ಹೊಸ ಮನೆಗೆ ಹೋಗಬೇಕಿತ್ತು ,ಬೆಂಗಳೂರು ನಲ್ಲಿ ಒಂದ್ ಮನೆ ಮಾಡಿ ತಮ್ಮ ಕನಸಿನ ಮನೆಯ ಬಗ್ಗೆ ನೂರಾರು ಕನಸು ಕಂಡಿದ್ದ ಕುಟುಂಬಕ್ಕೆ ಬರ ಸಿಡಿಲೊಂದು ಬಡಿದಿದೆ ನಂಬಲಾಗದ ದುರ್ಘಟನೆ ನಡೆದುಹೋಗಿತು. ಗೃಹಪ್ರವೇಶ ನಡೆಯಬೇಕಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ ಇಬ್ಬರು ಪ್ರಾಣ ಪಕ್ಷಿ ಹಾರೀ ಹೋಗಿದೆ ಹಾಗಾದ್ರೆ ಘಟನೆ ನಡೆದಿದ್ದಲ್ಲಿ ಈ ಸ್ಟೋರಿ..ನೋಡಿ…
ಸ್ನೇಹಿತ ಪತ್ನಿ ಮೇಲೆಯೇ ಕಣ್ಣು ಹಾಕಿದ್ದ ಗೆಳೆಯ: ಬಾರ್ ನಲ್ಲಿ ಪಾರ್ಟಿ ಮಾಡಿ ಕತ್ತು ಸೀಳಿದ ದೋಸ್ತಾ!
ದಗ ದಗನ ಉರಿಯುತ್ತಿರುವ ಬೆಂಕಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವ ಅಗ್ನಿಶಾಮಕ ದಳ ಸಿಬ್ಬಂದಿ ಈ ಘಟನೆ ನಡೆದಿರುವುದು ಮಾಗಡಿ ರಸ್ತೆಯ ಸೀಗೆಹಳ್ಳಿಯ ಶಿವಾನಿ ಗ್ರೀನ್ಸ್ ಲೇಔ ಟ್ ನಲ್ಲಿ ಮಂಡ್ಯ ಮೂಲದ ಸತೀಶ್ ಅನ್ನೋರು ಹೊಸದಾದ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಬಹುತೇಕ ಕಟ್ಟಡ ಕೆಲಸ ಮುಗಿದಿದ್ದು, ಪೇಂಟಿಂಗ್ ಹಾಗೂ ವುಡ್ ವರ್ಕ್ ಕೆಲಸ ನಡೆಯುತ್ತಿತ್ತು. ಇನ್ನೊಂದು ತಿಂಗಳಲ್ಲಿ ಗೃಹಪ್ರವೇಶ ಮಾಡಲು ತಯಾರಿ ಮಾಡಿಕೊಂಡಿದ್ದರು ಆದರೆ ಕೆಲಸಗಾರರ ಅಡಿಗೆಗೆ ಬಳಸುತ್ತಿದ್ದ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೇ .
ಇನ್ನೋ ನೋಡ ನೋಡ್ತಿದ್ದ ಬೆಂಕಿ ವ್ಯಾಪಕವಾಗಿ ಆವರಿಸಿ ಇಡೀ ಕಟ್ಟಡಕ್ಕೆ ಸುಟ್ಟು ಕರಾಕಾಲಗಿದೆ ಬೆಂಕಿಯ ಕೆನಾಲಿಗೆಗೆ ಹೊರ ರಾಜ್ಯದಿಂದ ಉದ್ಯೋಗ ಮಾಡಲು ಬಂದಿದಾ ಇಬ್ಬರು ಕಾರ್ಮಿಕರು ಸಜೀವವಾಗಿ ಸುಟ್ಟು ಕರಕಲಾಗಿದ್ದಾರೆ. ಬಿಹಾರ ಮೂಲದ ಉದಯಭಾನು ,ಉತ್ತರ ಪ್ರದೇಶ ದ ರೋಷನ್ ಮೃತ ದುರ್ದೈವಿಗಳು, ಇನ್ನು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರ್ಮಿಕನೊಬ್ಬ ನೀರಿನ ಟ್ಯಾಂಕರ್ ಮೇಲೆ ಕುಳಿತಿದ್ದು, ಅಗ್ನಿಶಮಾಕ ಸಿಬ್ಬಂದಿ ಸಮಯ ಪ್ರಜ್ಞೆ ಇಂದ ಕಾರ್ಮಿಕನನ್ನ ರಕ್ಷಣೆ ಮಾಡಿದ್ದಾರೆ. ಇನ್ನೂ ಘಟನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಾಗಿರಬಹುದೇದು ಅನುಮಾನವಕ್ತವಾಗಿದೆ.ಮನೆಯಲ್ಲಿ ಪ್ಲೈವುಡ್ ದೊಡ್ಡ ಪ್ರಮಾಣದಲ್ಲಿ ಇದ್ದಿದರಿಂದ ಬೆಂಕಿ ಯೂ ಇಡೀ ಮನೆಗೆ ಆವರಿಸಿಕೊಂಡಿದೆ. ಮನೆಯ ತುಂಬೆಲ್ಲಾ ಹೊಗೆಯೂ ದಟ್ಟವಾಗಿ ಆವರಿಸಿಕೊಂಡಿದೆ ಇದರಿಂದ ಒಳಗೆ ಇದ್ದವರಿಗೆ ಹೊರಗೆ ಬರಲು ದಾರಿ ಕಾಣದೆ ಬೆಂಕಿಯ ಆರ್ಭಟಕ್ಕೆ ಪ್ರಾಣ ಬಿಟ್ಟಿದ್ದಾರೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ತನಿಕೆಯಿಂದ ತಿಳಿಯಬೇಕಿದೆ ಅಲ್ಲದ ಮೃತಪಟ್ಟವರ ಕುಟುಂಬದ ವರಿಗೆ ಮಾಹಿತಿ ನೀಡಿದ್ದು ಅವರು ಬಂದ ನಂತರ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹಗಳನ್ನು ಹಸ್ತಾಂತರಿಸಲಾಗುತ್ತದೆ ಹೊಸ ಮನೆಗೆ ಹೋಗಲು ಕನಸು ಕಂಡಿದ್ದ ಕುಟುಂಬ ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.