ಬೆಂಗಳೂರು:- ಆತ ಜೀವಕ್ಕೆ ಜೀವ ಕೊಡೊ ಸ್ನೇಹಿತ ಅಂತಾ ಒಟ್ಟೊಟ್ಟಿಗೆ ಓಡಾಡ್ತಿದ್ದ..ಆದ್ರೆ ಜೊತೆಲೆ ಇದ್ಕೊಂಡು ಸ್ನೇಹಿತನ ಹೆಂಡತಿ ಮೇಲೆಯೇ ಕಣ್ಣಾಕಿದ್ದ..ಗೆಳೆಯನಿಗೆ ಗೊತ್ತಾಗದಂತೆ ಆತನ ಪತ್ನಿಗೆ ಗುಟ್ಟು ಗುಟ್ಟಾಗಿ ಮೆಸೆಜ್ ಮಾಡ್ತಿದ್ದ..ಕಾಲ್ ಮಾಡಿ ಕಿರುಕುಳ ಕೊಡ್ತಿದ್ದ..ಈ ಎಲ್ಲಾ ವಿಚಾರ ಯಾವಾಗ ಗಂಡನಿಗೆ ಗೊತ್ತಾಯ್ತೋ ನಡೆದಿದ್ದು ಮಾತ್ರ ಘನಘೋರ
ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ!
ಹೌದು..ಈ ಫೋಟೊದಲ್ಲಿ ಕಾಣ್ತಿರೊ ಗೆಳೆಯರ ಹೆಸರು ಕಿರಣ್ ಹಾಗೂ ಅರ್ಜುನ್..ಕಿರಣ್ ಫ್ಯಾಬ್ರಿಕೇಶನ್ ಕೆಲಸ ಮಾಡ್ಕೊಂಡಿದ್ರೆ ಅರ್ಜುನ್ ಕಾರು ಚಾಲಕನಾಗಿದ್ದ..ಇಬ್ಬರು ತಲಘಟ್ಟಪುರ ಗಾಣಿಗರಪಾಳ್ಯ ನಿವಾಸಿಗಳು..ಇಬ್ಬರು ಬಾಲ್ಯದ ಸ್ನೇಹಿತರು..ಜನವರಿ 4 ರಂದು ಸಂಜೆ ಅರ್ಜುನ್ ಕಿರಣ್ ನನ್ನ ಕುಡಿಯೋಣ ಬಾರೊ ಅಂತಾ ಗಾಣಿಗರ ಪಾಳ್ಯ ಸರ್ಕಲ್ ನಲ್ಲಿರುವ ಬಾರ್ ವೊಂದಕ್ಕೆ ಕರೆದೊಯ್ದಿದ್ದ..ಇಬ್ರು ಕಂಠ ಪೂರ್ತಿ ಕುಡಿದಿದ್ದಾರೆ..ರಾತ್ರಿ 9.30 ಆಗ್ತಿದ್ದಂತೆ ಇದ್ದಕ್ಕಿದ್ದಂತೆ ತನ್ನ ಬಳಿ ಇದ್ದ ಲಾಂಗ್ ತೆಗೆದ ಅರ್ಜುನ್ ಕಿರಣ್ ಮೇಲೆ ಬೀಸಿದ್ದ..ಕತ್ತಿಗೆ ಬಲವಾಗಿ ಹೊಡೆದಿದ್ದ..ಕಿರಣ್ ಕುಡಿಯಲು ಹೋಗಿದ್ದ ಬಾರ್ ಪಕ್ಕದಲ್ಲಿಯೇ ರಕ್ತಸಿಕ್ತವಾಗಿ ಬಿದ್ದಿದ್ದ..ತಕ್ಷಣ ಬಂದ ತಲಘಟ್ಟಪುರ ಪೊಲೀಸರು ಕಿರಣ್ ನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಆರೋಪಿ ಅರ್ಜುನ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಹಲ್ಲೆ ಹಿಂದಿನ ಅಸಲಿ ಸತ್ಯ ಗೊತ್ತಾಗಿದೆ..ಹೌದು..ಇನ್ನೂ ಬ್ಯಾಚುಲರ್ ಆಗಿದ್ದ ಕಿರಣ್ ಅರ್ಜುನ್ ಮನೆಗೆ ಬಂದು ಹೋಗ್ತಿದ್ದ..ಹೀಗಿದ್ದವನು ಅರ್ಜುನ್ ಪತ್ನಿ ಮೇಲೆಯೇ ಕಣ್ಣಾಕಿದ್ದ..ಗೆಳೆಯನಿಗೆ ಗೊತ್ತಾಗದಂತೆ ಕಾಲ್,ಮೆಸೆಜ್ ಮಾಡಿ ಟಾರ್ಚರ್ ಕೊಡ್ತಿದ್ದ..ಈ ಎಲ್ಲಾ ವಿಚಾರ ಗೊತ್ತಾಗ್ತಿದ್ದಂತೆ ಅರ್ಜುನ್ ಕಿರಣ್ ನನ್ನ ಒಂದು ಗತಿ ಕಾಣಲು ನಿರ್ಧರಿಸಿದ್ದ..ಪ್ಲಾನ್ ನಂತೆ ಕಿರಣ್ ನನ್ನ ಬಾರ್ ಗೆ ಕರೆದೊಯ್ದ ಅರ್ಜುನ್…ಕಂಠ ಪೂರ್ತಿ ಕುಡಿಸಿ ಬಳಿಕ ಹಲ್ಲೆ ಮಾಡಿದ್ದಾನೆ..
ಗಾಯಾಳು ಕಿರಣ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ..ಅರ್ಜುನ್ ಬಂಧಿಸಿರುವ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ..
ಅದೇನೆ ಹೇಳಿ ಸ್ನೇಹಿತರಂದ್ರೆ ರಕ್ತ ಸಂಬಂಧಿಕರಿಗಿಂತ ಮೇಲು ಅಂತೀವಿ ಆದ್ರೆ ಒಂದೇ ತಟ್ಟೆಲಿ ಊಟ ಮಾಡಿ ಪತ್ನಿ ಮೇಲೆಯೇ ಕಣ್ಣಾಕಿದ್ದಾನೆ..ಕೋಪದ ಕೈಗೆ ಬುದ್ಧಿ ಕೊಟ್ಟವನು ಜೈಲು ಪಾಲಾಗಿದ್ದಾನೆ..