ಬೆಂಗಳೂರು:- ಜನ ಹಾದಿ-ಬೀದಿಯಲ್ಲಿ ಬೈತಿದ್ದಾರೆ, ಮೊದಲು ಅವರದ್ದು ನೋಡಿಕೊಳ್ಳಲಿ ಎಂದು ಹೇಳುವ ಮೂಲಕ ಸಚಿವ ಈಶ್ವರ್ ಖಂಡ್ರೆ ಅವರು ಆರ್ ಅಶೋಕ್ ಗೆ ಟಾಂಗ್ ಕೊಟ್ಟಿದ್ದಾರೆ.
ನವೆಂಬರ್ಗೆ ಸಿಎಂ ಬದಲಾವಣೆ ಆಗುತ್ತಾರೆ ಎಂಬ ಆರ್.ಅಶೋಕ್ ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಅಶೋಕ್ ಹೇಳಿಕೆಗೆ ಯಾವುದೇ ಬೆಲೆ ಇಲ್ಲ. ಅವರ ಪಕ್ಷದ ಪರಿಸ್ಥಿತಿ ಏನಾಗಿದೆ? ಜನರು ಹಾದಿ-ಬೀದಿಯಲ್ಲಿ ಬಿಜೆಪಿಯವರಿಗೆ ಬೈಯುತ್ತಿದ್ದಾರೆ. ಅವರು ಜಗಳ ಮಾಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದಾರೆ. ಅವರಿಗೆ ನೈತಿಕತೆ ಇದೆಯಾ? ಮಾನ ಮರ್ಯಾದೆ ಇದೆಯಾ? ಜನರ ಮುಂದೆ ಅವರು ಹೋಗೋಕೆ ಸಾಧ್ಯವಿದೆಯಾ? ಮೊದಲು ಬಿಜೆಪಿಯಲ್ಲಿನ ಸಮಸ್ಯೆ ಪರಿಹಾರ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.
ಇದೇ ವೇಳೆ ಡಿಕೆ ಶಿವಕುಮಾರ್ ಸಿಎಂ ಎಂಬ ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ ನಮ್ಮ ವರಿಷ್ಠರು ಯಾರು ಮಾತಾಡಬಾರದು ಎಂದು ಹೇಳಿದ್ದಾರೆ. ಹೈಕಮಾಂಡ್ ನಾಯಕರು ಹೇಳಿರುವ ಕಾರಣ ಈ ಬಗ್ಗೆ ನಾನೇನು ಮಾತನಾಡುವುದಿಲ್ಲ. ನಮ್ಮ ಉದ್ದೇಶ ಅಭಿವೃದ್ಧಿ ಮಾಡಬೇಕು. ಜನರಿಗೆ ಒಳಿತು ಮಾಡಬೇಕು. ಉತ್ತಮ ಸಮಾಜ ನಿರ್ಮಾಣ ಮಾಡಬೇಕು. ಇರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.