ವಿಜಯಪುರದಲ್ಲಿ : ನಗರದಲ್ಲಿ ಆತಂಕ ಮೂಡಿಸಿದ್ದ ಮುಸುಧಾರಿಗಳ ಗ್ಯಾಂಗ್ನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಮೂಲದ ಪಾರ್ದಿ ಗ್ಯಾಂಗ್ ಪೊಲೀಸರ ಬಲೆಗೆ ಬಿದಿದ್ದಾರೆ. ನಗರದ ಜೈನಾಪೂರ ಲೇಔಟ್, ರಾಜಕುಮಾರ್ ಲೇಔಟ್ ಸೇರಿದಂತೆ ನಗರದಲ್ಲಿ ಮುಸುಕುಧಾರಿಗಳ ದರೋಡೆ ಪ್ರಕರಣಗಳು ಹೆಚ್ಚಾಗಿತ್ತು. ಅಲ್ಲದೇ ಜೈನಾಪೂರ ಲೇಔಟ್ ನಲ್ಲಿ ಈ ಮುಸುಕುಧಾರಿಗಳ ತಂಡ ದರೋಡೆ ಯತ್ನದ ವೇಳೆ ಸಂತೋಷ ಕನ್ನೂರ್ ಎಂಬುವನಿಗೆ ಚಾಕು ಇರಿದು ಮೊದಲ ಮಹಡಿಯಿಂದ ಎತ್ತಿ ಬಿಸಾಕಿದ್ದರು. ಬುಧವಾರ ಚಿಕಿತ್ಸೆ ಫಲಿಸದೆ ಸಂತೋಷ ಕನ್ನೂರ್ ಸಾವನ್ನಪ್ಪಿದ್ದರು.
ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಪಾರ್ದಿ ಗ್ಯಾಂಗ್ನ ಮೂವರನ್ನು ಬಂಧಿಸಿದ್ದಾರೆ. ವಿಠ್ಠಲ ಚೌಹಾನ್, ಸುರೇಶ್ ಚೌಹಾನ್, ಆಕಾಶ್ @ ಅಕ್ಷಯ್ ರಾವತ್ ಬಂಧಿತರಾಗಿದ್ದು, ಐವರು ಮುಸುಕುಧಾರಿ ದರೋಡೆಕೋರರು ಈ ಕೃತ್ಯ ಎಸಗಿದ್ದು, ಈ ಪೈಕಿ ಮೂವರನ್ನ ಬಂಧಿಸಿ ವಶಕ್ಕೆ ಪಡೆದಿದ್ದು, ನಾಲ್ಕು ದಿನಗಳ ಹಿಂದೆಯೇ ಕೋರ್ಟ್ಗೆ ಹಾಜರು ಪಡೆಸಿದ್ದಾರೆ. ನಿನ್ನೆ ಕೋರ್ಟ್ನಿಂದ ಪೊಲೀಸ್ ಕಸ್ಟಡಿಗೆ ಪಡೆದಿರುವ ಗಾಂಧಿ ಚೌಕ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದಲ್ಲದೇ ಇನ್ನಿಬ್ಬರು ಖತರ್ನಾಕ್ ದರೋಡೆಕೋರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.