ಹುಬ್ಬಳ್ಳಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ಹೊರಗಿಟ್ಟು ಲಿಂಗಾಯತ ಪ್ರಮುಖರ ಸಭೆ ನಡೆಸಲು ಭಿನ್ನರು ಯೋಜನೆ ರೂಪಿಸಲಾಗಿದೆ ಎಂಬ ವಿಚಾರ ಕೇವಲ ಊಹಾಪೋಹ ನಾನು ಒಬ್ಬ ನಾಯಕ ನನ್ನ ಯಾರು ಈ ಬಗ್ಗೆ ಕೇಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಎಲ್ಲಿಯೂ .ಈ ಬಗ್ಗೆ ಯಾರು ಅಧಿಕವಾಗಿ ಹೇಳಿಲ್ಲ , ನಿಮಗೆ ಯಾರಾದರೂ ಹೇಳಿದರೆ ಹೇಳಿ, ನಾನು ಒಬ್ಬ ಲಿಂಗಾಯತ ನಾಯಕ ಆಗಿದ್ದು ಕೇಂದ್ರ ಸಚಿವ ಸೋಮಣ್ಣ ನೀಡುವ ವರದಿ ಮೇಲೆ ಮುಂದಿನ ನಿರ್ಧಾರ ಗೊತಿಲ್ಲ. ಬಿಜೆಪಿ ಬಂಡಾಯ ನಾಯಕರ ಹೈಕಮಾಂಡ್ ಎಲ್ಲವನ್ನ ಸರಿ ಮಾಡುತ್ತದೆ ಎಂಬ ನಂಬಿಕೆ ಇದೆ ಎಂದರು.
ದೆಹಲಿ ಚುನಾವೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರು, ದೆಹಲಿ ಮತದಾರರು ಎಎಪಿ ಆಡಳಿತ ವಿರುದ್ಧ ಅಸಮಾಧಾನಗೊಂಡಿದ್ದಾರೆ. 10 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದು, ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ . ಕಳೆದ ಹತ್ತು ವರ್ಷಗಳಲ್ಲಿ ಏನು ಅವರ ಕೊಡುಗೆ..? ಭ್ರಷ್ಟಾಚಾರ ವಿರೋಧಿ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ ಇಂದು ಏನು ಮಾಡಿತು ಎಂದ ಅವರು ಇದೊಂದು ಹೇಳುವುದು ಒಂದು ಮಾಡೋದು ಒಂದು ಆಗಿದೆ ಎಂದರು.
ರಾಜ್ಯದಲ್ಲಿ ಮೈಕ್ರೊಪೈನಾನ್ಸ್ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ಮಸೂದೆಯನ್ನ ರಾಜ್ಯಪಾಲರಿಗೆ ಕಳುಹಿಸಿದ್ದು ಇದನ್ನು ಸರಿಯಾಗಿ ಜಾರಿಗೆ ಮಾಡಲು ಮುಂದಾಗುತಿಲ್ಲ ಉದ್ದೇಶದಿಂದಲೇ ವಿಳಂಬ ಮಾಡುತ್ತಾ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.