ಬಾಲಿವುಡ್ ಖ್ಯಾತ ನಟಿ, ಐಟಂ ಸಾಂಗ್ ಮೂಲಕವೇ ಪ್ರೇಕ್ಷಕರ ನಿದ್ದೆ ಕದ್ದ ಹಾಟ್ ಬೆಡಗಿ ನೋರಾ ಫತೇಹಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೆ. ಸುದ್ದಿ ಕೇಳಿ ನೋರಾ ಅಭಿಮಾನಿಗಳು ಕಂಗಲಾಗಿದ್ದು ನಟಿಗೆ ಸಾವಿಗೆ ಕಂಬನಿ ಮಿಡಿದಿದ್ದಾರೆ. ಸಾಹಸ ಕ್ರೀಡೆಯೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ನೋರಾ ಪ್ರತಾಪಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನುವ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಂಗಿ ಜಂಪಿಂಗ್ನಲ್ಲಿ ಪಾಲ್ಗೊಂಡಿದ್ದ ನೋರಾ ಅಲ್ಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬರೆದ ವಿಡಿಯೊ ಹರಿದಾಡುತ್ತಿದೆ. ಅಂದಹಾಗೆ ಇದೊಂದು ಫೇಕ್ ವಿಡಿಯೊ ಎಂದು ಮೂಲಗಳು ಸ್ಪಷ್ಟಪಡಿಸಿವೆ.
”ಬಾಲಿವುಡ್ ಪಾಲಿಗೆ ಬ್ಯಾಡ್ ನ್ಯೂಸ್. ಜನಪ್ರಿಯ ಬಾಲಿವುಡ್ ಕಲಾವಿದೆ ನೋರಾ ಫತೇಹಿ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ” ಎಂದು ವಿಡಿಯೋ ಕ್ಯಾಪ್ಶನ್ನಲ್ಲಿ ಬರೆಯಲಾಗಿದೆ. ವಿಡಿಯೊ ವೈರಲ್ ಆದ ಬೆನ್ನಲ್ಲೇ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ”ಸುಳ್ಳು ಸುದ್ದಿ ಹಬ್ಬಿಸುತ್ತೀರಿ. ದಯವಿಟ್ಟು ಯಾರೂ ವದಂತಿಯನ್ನು ನಂಬಬೇಡಿ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಪ್ರವಾಸಿಗರೊಬ್ಬರು ಪ್ರವಾಸಿ ತಾಣದಲ್ಲಿ ಪಾಲ್ಗೊಂಡಿರುವ ವಿಡಿಯೊವನ್ನು ಶೇರ್ ಮಾಡಿ ನೋರಾ ಎನ್ನುವ ಹೆಸರಿನಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿರುವವರ ಬಗ್ಗೆ ಹಲವರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಅಮೆರಿಕದ ಲಾಸ್ ಏಂಜಲಿಸ್ನಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಚ್ಚಿನ ಮಧ್ಯೆ ಸಿಕ್ಕಿ ಬಿದ್ದು ನೋರಾ ಪಾರಾಗಿ ಬಂದಿದ್ದರು. ಅದಾದ ಬಳಿಕ ಅವರು ವಿಡಿಯೊ ಮೂಲಕ ತಾವು ಸುರಕ್ಷಿತವಾಗಿರುವ ಮಾಹಿತಿ ನೀಡಿದ್ದರು.