ಬೆಂಗಳೂರು:- ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರ ಕದಿಯುತ್ತಿದ್ದ ಗ್ಯಾಂಗ್ ಅನ್ನು ಜೆಪಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೈದರ್ ಅಲಿ, ಗೌಸ್ ಬೇಗ್ ಬಂಧಿತ ಆರೋಪಿಗಳು.
ಆರೋಪಿಗಳ ಬಂಧನದಿಂದ ಬರೋಬ್ಬರಿ 20 ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು, ಹೈಎಂಡ್ ಕಾರುಗಳ ಮ್ಯಾಗ್ ವ್ಹೀಲ್ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಆರೋಪಿಗಳಿಂದ 60 ಮ್ಯಾಗ್ ವ್ಹೀಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು, ರಾತ್ರಿ ವೇಳೆ ಸ್ಕೂಟಿಯಲ್ಲಿ ಬಂದು ಕ್ಷಣ ಮಾತ್ರದಲ್ಲಿ ವ್ಹೀಲ್ ಕದ್ದು ಎಸ್ಕೇಪ್ ಆಗುತ್ತಿದ್ರು.ಒಬ್ಬ ಕಾರಿನ ವ್ಹೀಲ್ ಬಿಚ್ಚಿದ್ರೆ ಮತ್ತೊಬ್ಬ ಅಕ್ಕಪಕ್ಕ ವಾಚ್ ಮಾಡುತ್ತಿದ್ದ. ಕಾರಿನ ವ್ಹೀಲ್ ಕದ್ದರೆ ಸುಲಭವಾಗಿ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳಲ್ಲ ಎಂಬ ಧೈರ್ಯದಿಂದ ಕಳ್ಳತನ ಮಾಡುತ್ತಿದ್ದರು.
ಆರೋಪಿಗಳು, ಅಂಗಡಿ, ಆನ್ಲೈನ್ ಮೂಲಕ ವ್ಹೀಲ್ ಮಾರುತ್ತಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿ ಜೆಪಿ ನಗರ ಪೊಲೀಸರು ಜೈಲಿಗಟ್ಟಿದ್ದಾರೆ.