ಬೆಂಗಳೂರು:- ಬೈಕ್ ಆಯ್ತು ಕಾರಾಯ್ತು..ಈಗ ಟ್ರ್ಯಾಕ್ಟರ್ ಗಳನ್ನ ಕದಿಯೋ ತಂಡವೊಂದು ಸಿಟಿಯಲ್ಲಿ ತಲೆ ಎತ್ತಿದೆ..ಟ್ರಾಕ್ಟರ್ ಜೊತೆಗೆ ಟ್ರಾಲಿಯನ್ನು ಕದ್ದೊಯ್ಯೊ ಖದೀಮರು ಅದನ್ನ ಮಾರಾಟ ಮಾಡಿ ತುಂಬಿಸಿಕೊಳ್ತಿದ್ರು..ಕದ್ದ ಮಾಲನ್ನ ತೆಗೆದುಕೊಂಡು ಹೋಗ್ತಿರುವಾಗ್ಲೆ ರೆಡ್ ಹ್ಯಾಂಡ್ ಆಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ..ಖದೀಮರ ಕೃತ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ..
ಪಶ್ಚಿಮ ಘಟ್ಟಗಳ ಸಾಲಿನ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದಕ್ಕೆ ಇದೇ ಕಾರಣ…
ಈತ ಪರ್ವೇಜ್..ಆಟೋದಲ್ಲಿ ಏರಿಯಾ ರೌಂಡ್ ಹಾಕ್ತಿದ್ದ ಈ ಆಸಾಮಿ ಇಳಿಜಾರಿನಲ್ಲಿ ನಿಂತಿರೊ ಟ್ರಾಕ್ಟರ್ ಗಳನ್ನ ಗುರ್ತಿಸ್ತಿದ್ದ..ಇನ್ನು ಇವ್ರು ಸಾದಿಕ್ ಎಂಬ ಒಂದೇ ಹೆಸರಿನ ಚೋರರು..ಪರ್ವೇಜ್ ಗುರ್ತಿಸ್ತಿದ್ದ ಟ್ರಾಕ್ಟರ್ ಗಳನ್ನ ಕಳ್ಳತನ ಮಾಡಿಕೊಂಡು ಹೋಗ್ತಿದ್ರು..ಹೀಗೆ ಹೋಗೊ ಖದೀಮರು ತಿಪಟೂರಿನ ನೊಣವಿನಕೆರೆಯಲ್ಲಿರೊ ಸೈಫುಲ್ಲಾ ಎಂಬಾತನಿಗೆ ಕಡಿಮೆ ಬೆಲೆಗೆ ಮಾರಾಟ ಮಾಡ್ತಿದ್ರು..ಆತ ಬೇರೆಯವರಿಗೆ ಟ್ರಾಕ್ಟರ್ ಸೇಲ್ ಮಾಡಿ ಕಾಸು ಮಾಡಿಕೊಳ್ತಿದ್ದ..ಕಳ್ಳರ ಕೈಚಳಕ ಸಿಸಿಟಿವಿ ನಲ್ಲಿ ಸೆರೆಯಾಗಿದೆ..
ಕೂಲಿ ಕೆಲಸ ಮಾಡ್ಕೊಂಡಿದ್ದ ಸಾದಿಕ್ ಹೆಸರ ಇಬ್ಬರು ಕ್ರಿಮಿಗಳು ಬೇಗ ಹಣ ಮಾಡಲು ಕಳ್ಳತನದ ಹಾದಿ ಹಿಡಿದಿದ್ರು..ಬೇರೆ ವಾಹನ ಇದ್ರೆ ಸ್ಟಾರ್ಟ್ ಮಾಡೋದು ಕಷ್ಟ ಅಂತಾ ಟ್ರಾಕ್ಟರ್ ಗಳನ್ನ ತಳ್ಳಿ ಸ್ಟಾರ್ಟ್ ಮಾಡಿಕೊಂಡು ಪರಾರಿ ಆಗ್ತಿದ್ರು..ಹೀಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣದ ತನಿಖೆಗೆ ಇಳಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ನೊಣವಿನ ಕೆರೆವರೆಗೆ ಹೋಗಿ ಬಂದಿದ್ರು ಆದ್ರೆ ಯಾವುದೇ ಪ್ರಯೋಜನ ಆಗಿರ್ಲಿಲ್ಲ..ಅದಾಗಿ ಕೆಲವೇ ದಿನದಲ್ಲಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರಾಕ್ಟರ್ ಕಳ್ಳತನ ಆಗಿರೋದು ಗೊತ್ತಾಗಿದೆ..ವಿಚಾರ ಗೊತ್ತಾಗ್ತಿದ್ದಂತೆ ತಕ್ಷಣಕ್ಕೆ ಅಲರ್ಟ್ ಆದ ಕೋಣನಕುಂಟೆ ಪೊಲೀಸರು ನೊಣವಿನ ಕೆರೆಯಲ್ಲಿ ಕಾಯುತ್ತಾ ಕುಳಿತಿದ್ರು..ಟ್ರಾಕ್ಟರ್ ಏರಿ ಬಂದ ಖದೀಮರು ಖಾಕಿ ಕೈಗೆ ಲಾಕ್ ಆಗಿದ್ದಾರೆ..ಪ್ರಕರಣ ಸಂಬಂಧ ಕಳ್ಳತನ ಕೇಸ್ ನಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು..ಬಂಧಿತರಿಂದ 20 ಲಕ್ಷ ಮೌಲ್ಯದ ನಾಲ್ಕು ಟ್ರ್ಯಾಕ್ಟರ್ ಹಾಗೂ ಟ್ರಾಲಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ..
ಕಷ್ಟ ಪಟ್ಟು ದುಡಿಯೊ ವಯಸ್ಸಲ್ಲಿ ನೆಟ್ಟಗೆ ದುಡಿದು ತಿನ್ನೋ ಬದಲು ಹೀಗೆ ಕಳ್ಳತನ ಮಾಡಿ ಈಗ ಪೊಲೀಸ್ ಅತಿಥಿಯಾಗಿದ್ದಾರೆ.