ಬೀದರ್:- ಜಿಲ್ಲೆಯ ಹುಮನಾಬಾದ ಪಟ್ಟಣದ ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ರಥ ಸಪ್ತಮಿ ನಿಮಿತ್ತ , ಸೂರ್ಯ ಜಯಂತಿ ನಿಮಿತ್ತ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಕಾಕಡಾರತಿ, ಪಂಚಾಮೃತ ಅಭಿಷೇಕ, ಅಷ್ಟೋತ್ತರ, ದೇವರಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ಜರುಗಿತು.
೧೨ ಅಡಿ ಎತ್ತರ ನಿರ್ಮಿಸಲಾದ ನೂತನ ರಥದಲ್ಲಿ, ವಿಷೇಶ ಅಲಂಕಾರದೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಪಟ್ಟಣದ ಬಸವೇಶ್ವರ ವೃತ್ತ , ಬಾಲಾಜಿಮಂದಿರ. ವೀರಭದ್ರೇಶ್ವರ ರಸ್ತೆ ಮುಖಾಂತರ ಪ್ರಮುಖ ಮಾರ್ಗಗಳ ಮೂಲಕ ಸಂಚರಿಸಿ ರಥವು ದೇವಸ್ಥಾನಕ್ಕೆ ತಲುಪಿತ್ತು.
ದೇವಸ್ಥಾನ ಮುಂಭಾಗ ಸೇರಿದ ಸಹಸ್ರಾರು ಭಕ್ತರು, ಹರ್ಷೋದ್ಘಾರ ಮುಗಿಲುಮುಟ್ಟಿತ್ತು. ಈ ಮಧ್ಯೆ ಮೊಸರು ಕುಡಿಕೆ ಒಡೆಯುವ ಮೂಲಕ ದಿಂಡಿ ಮೆರವಣಿಗೆ ಸಂಪನ್ನಗೊಂಡಿತು. ಸರ್ವ ಭಕ್ತಾಧಿಗಳಿಗೆ ಅನ್ನಸಂರ್ತಪಣೆ ನಡೆಯಿತು. ಸಹಸ್ರಾರು ಭಕ್ತರು ಭಕ್ತಿ ಭಾವದಿಂದ ಭಾಗಿಯಾಗಿ, ದೇವರ ಕೃಪೆ ಗೆ ಪಾತ್ರರಾದರು.