ಬೆಂಗಳೂರು: ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ, ಅರ್ಜಿಯೂ ಹಾಕಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ.
ನನ್ನನು ವರಿಷ್ಠರು ಪ್ರತಿಪಕ್ಷದ ನಾಯಕನನ್ನಾಗಿ ಮಾಡಿದ್ದಾರೆ. ಅದನ್ನು ಗೌರವದಿಂದ ನಡೆಸಿಕೊಂಡು ಹೋಗುತ್ತಿದ್ದೇನೆ. ಕೇಂದ್ರದ ನಾಯಕರು ಎಲ್ಲವನ್ನು ಅವಲೋಕನ ಮಾಡುತ್ತಿದ್ದಾರೆ. ಕೋರ್ ಕಮಿಟಿ ಸದಸ್ಯರಿಗೆ, ಕಾರ್ಯಕರ್ತರಿಗೆ ಪಕ್ಷದಲ್ಲಿನ ಕಚ್ಚಾಟ ಬೇಸರ ಮತ್ತು ನೋವು ತರಿಸಿದೆ. ಇವೆಲ್ಲವನ್ನು ಹೈಕಮಾಂಡ್ ಸರಿ ಮಾಡಲಿದೆ ವಿಶ್ವಾಸ ವ್ಯಕ್ತಪಡಿಸಿದರು.
Railway Jobs: SSLC, ITI ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ..! ಮಾಸಿಕ ವೇತನ ₹ 20,000
ಇನ್ನೂ ನಾನು, ಬೊಮ್ಮಾಯಿಯವರು ಆರೆಸ್ಸೆಸ್ ನಾಯಕರ ಭೇಟಿಗೆ ಹೋಗಿದ್ದೆವು ಎಂದು ಪತ್ರಿಕೆಯೊಂದರಲ್ಲಿ ಬಂದಿರುವುದು ಸುಳ್ಳು ಸುದ್ದಿಯಾಗಿದೆ. ನಾನಾಗಲೀ, ಬೊಮ್ಮಾಯಿಯವರಾಗಲೀ ಸಂಘದವರ ಭೇಟಿ ಮಾಡಿಲ್ಲ. ರಾಜಕೀಯದಲ್ಲಿ ಆರ್ಎಸ್ಎಸ್ ಮೂಗು ತುರಿಸುವುದಿಲ್ಲ. ಪಕ್ಷದ ವಿಚಾರ ಸಂಘದವರ ಜತೆ ಚರ್ಚಿಸುವ ವ್ಯವಸ್ಥೆ ಇಲ್ಲ. ಪಕ್ಷದಲ್ಲಿ ಎಲ್ಲರೂ ಅನುಸರಿಸಿಕೊಂಡು ಹೋಗಬೇಕು. ಈ ವಿಚಾರದಲ್ಲಿ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ ಎಂದು ನುಡಿದರು.