ಹುಬ್ಬಳ್ಳಿ: ಬಿಜೆಪಿಯೊಳಗೆ ಮೋದಿ ಬದಲಾವಣೆ ಬಗ್ಗೆ ಚರ್ಚೆ ಆಗ್ತಿದೆ. ಮೋದಿ ವಿರುದ್ಧ ಮಾತನಾಡೋಕೆ ಯಾರಿಗೂ ಧೈರ್ಯ ಇಲ್ಲ, ರಾಮುಲು ಬಂದ್ರೆ ನಾನು ವೈಯಕ್ತಿಕವಾಗಿ ಸ್ವಾಗತ ಮಾಡುತ್ತೇನೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದರು. ಗ್ಯಾರಂಟಿಯಿಂದ ಶಾಸಕರಿಗೆ ಅನುದಾನ ಇಲ್ಲಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಶಾಸಕರು ಈ ರೀತಿ ಹೇಳಿದ್ದಾರೆ. ಆದರೆ ಸಾಮಾನ್ಯವಾಗಿ ಬರುವ ಅನುದಾನ ಬರ್ತಿದೆ. ಹೆಚ್ಚಿನ ಅನುದಾನ ಕೊಟ್ಟಿಲ್ಲ ಅಷ್ಟೇ. ಬಿ.ಆರ್.ಪಾಟೀಲ್ ಯಾಕೆ ರಾಜೀನಾಮೆ ಕೊಟ್ಟಿದ್ದಾರೆ ಅವರನ್ನೇ ಕೇಳಿ. ಸೂರ್ಯ ಚಂದ್ರ ಇರುವವರಿಗೆ ಅನುದಾನ ಕೊರತೆ ಇರುತ್ತದೆ. ಬೆಡ್ತಿ ನಾಲೆ, ಹುಲಿ ಕೋಟಿ ಸೇರಿ ಹಲವು ಕಾಮಗಾರಿಗೆ ಅನುದಾನ ಕೊಟ್ಟಿದ್ದೇವೆ ಎಂದರು.
ದೆಹಲಿ ಚುನಾವಣೆ ವಿಚಾರದಲ್ಲಿ ಸತ್ಯ ಹೇಳಬೇಕಾಗುತ್ತೆ, ಸರ್ವೇ ಪ್ರಕಾರ ನಮ್ಮ ಪಕ್ಷ 5-10 ಗೆಲ್ಲುತ್ತದೆ. ಆಪ್ ಪಕ್ಷ ಮೊದಲು, ಸೆಕೆಂಡು ಬಿಜೆಪಿ ಇದೆ. ರಾಹುಲ್ ಗಾಂಧಿ ಅವರನ್ನು ಇನ್ನು ದೇಶದ ಜನ ಅರ್ಥ ಮಾಡ್ಕೊಂಡಿಲ್ಲ. ಬಿಜೆಪಿ ಅವರ ದೇಶದಲ್ಲಿ ಎಐ ಯಾವ ಲೆವೆಲ್ ನಲ್ಲಿದ್ದೇವೆ. ಚೈನಾಗೆ ಹೋಲಿಸಿಕೊಳ್ಳೋಕೆ ಆಗಲ್ಲ, 10 ವರ್ಷದಲ್ಲಿ ಚೈನಾ ಏನೆಲ್ಲಾ ಮಾಡಿದೆ. ಡಾಲರ್ ಮುಂದೆ ರೂಪಾಯಿ ದಿನದಿಂದ ದಿನಕ್ಕೆ ಕುಸಿತ ಇದೆ ಎಂದರು.
ದೇಶದ ಸಾಲ ಎಷ್ಟಾಗಿದೆ ಅಂತ ಯಾಕೆ ಕೇಳಬಾರದು. 70 ವರ್ಷದಲ್ಲಿ ಆಗಿರೋ ಸಾಲಕ್ಕೆ 3 ಪಟ್ಟು 10 ವರ್ಷದಲ್ಲಿ ಆಗಿದೆ. ಪ್ರಧಾನ ಮಂತ್ರಿ ಮೋದಿ ಒಬ್ಬ ಮನುಷ್ಯನ ತಲೆ ಮೇಲೆ 1 ಲಕ್ಷ ಸಾಲ ಹೋರಿಸಿದ್ದಾರೆ. ಇದು ಸಾಧನೆ ಅಲ್ವಾ? ಎಲ್ಲರಿಗಿಂತ ದೊಡ್ಡ ಸಾಧನೆ ಆಲ್ವಾ ಇದು..? ಬಲಿಷ್ಠ 10 ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ, ಈಗ ಹೊರ ಬಿದ್ದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ನೇಹಾ ಹಿರೇಮಠ ಕೊಲೆ ಪ್ರಕರಣದ ಹಿಂದೇ ಶಾಸಕರೊಬ್ಬರ ಕೈವಾಡ ಇರುವ ಆರೋಪವನ್ನು ನಾನು ಒಪ್ಪುವುದಿಲ್ಲ. ಪ್ರಮೋದ್ ಮುತಾಲಿಕ್ ಅವರು ಯಾವ ಉದ್ದೇಶದಿಂದ ಹೀಗೆ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಇದನ್ನು ಅವರನ್ನೇ ಕೇಳಬೇಕು. ಪ್ರಕರಣದ ಮೊದಲಿನಿಂದಲೂ ನಾನು ಇಲ್ಲಿಯೇ ಇದ್ದೇನೆ. ಸರ್ಕಾರದ ಮಟ್ಟದಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಅದೆಲ್ಲವನ್ನೂ ಮಾಡಿದ್ದೇವೆ. ಯಾರು ಏನೇ ಆರೋಪ ಮಾಡಿದರೂ ಸರ್ಕಾರ ಮಟ್ಟದಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಹೇಗೆಲ್ಲಾ ತನಿಖೆ ನಡೆಸಬೇಕು ನಡೆಸುತ್ತಿದೆ ಎಂದರು.