ಬೆಂಗಳೂರು: ಶಾಸಕರು ಹೇಳಿರೋ ಬಗ್ಗೆ ನಾನೇನು ಕಾಮೆಂಟ್ ಮಾಡೋಕೆ ಆಗಲ್ಲ ಎಂದು ಕಾಂಗ್ರೆಸ್ ನಾಯಕ ಹರಿಪ್ರಸಾದ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಶಾಸಕರು ಹೇಳಿರೋ ಬಗ್ಗೆ ನಾನೇನು ಕಾಮೆಂಟ್ ಮಾಡೋಕೆ ಆಗಲ್ಲ. ಎಐಸಿಸಿ ಅಧ್ಯಕ್ಷರು ಹೇಳಿದ ಮೇಲೆ ಎಲ್ಲರೂ ಫಾಲೋ ಮಾಡಬೇಕು. ಹೀಗಿದ್ದರೂ ಮಾತನಾಡುತ್ತಿದ್ದಾರೆ ಅಂದರೆ ನಾಯಕರೇ ತೀರ್ಮಾನ ಮಾಡಬೇಕು. ಇದರ ಬಗ್ಗೆ ನಾನೇನು ಕಾಮೆಂಟ್ ಮಾಡಲ್ಲ ಎಂದರು.
Railway Jobs: SSLC, ITI ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ..! ಮಾಸಿಕ ವೇತನ ₹ 20,000
ಪಕ್ಷದ ಶಿಸ್ತು ಅನ್ನೋದು, ಸಿದ್ದರಾಮಯ್ಯ, ಡಿಕೆಶಿ, ಹರಿಪ್ರಸಾದ್ ಅಂತ ಬರಲ್ಲ. ಅಶಿಸ್ತು ಅಂದ್ರೆ ಅಶಿಸ್ತೇ. ಯಾರೇ ಅಶಿಸ್ತು ತೋರಿಸಿದ್ರೆ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ. ಅಆಸಮಿತಿ ಅವರು ಯಾವುದು ಶಿಸ್ತು, ಯಾವುದು ಅಶಿಸ್ತು ಅಂತ ತೀರ್ಮಾನ ಮಾಡಬೇಕು. ಅದೇನು ದೊಡ್ಡ ವಿಚಾರ ಅಲ್ಲ ಎಂದು ತಿಳಿಸಿದರು.