ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಾಗುತ್ತಿದೆ. ಇದೀಗ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವನ್ನಪ್ಪಿದ್ದಾರೆ. ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ರೇಷ್ಮಾ ಬಿ (25) ಎಂಬ ಬಾಣಂತಿ ಮಹಿಳೆ ಬಹು ಅಂಗಾಗ ವೈಫಲ್ಯದಿಂದ ಸಾವನ್ನಪ್ಪಿರೋದಾಗಿ ವರದಿಯಾಗಿದೆ. ಇನ್ನು ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವಾಗಿದೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಜನವರಿ 4 ರಂದು ಬಿಮ್ಸ್ ಆಸ್ಪತ್ರೆಗೆ ರೇಷ್ಮಾರನ್ನು ದಾಖಲಿಸಲಾಗಿತ್ತು. ಬಳಿಕ ಜನವರಿ 6 ರಂದು ಸಿಜರೀನ್ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದರು. ಆ ನಂತರ ಯಾವುದೇ ಸಮಸ್ಯೆ ಇಲ್ಲ ಅಂತಾ ಜನವರಿ 8 ರಂದು ತಾಯಿ ಮಗುವನ್ನ ಡಿಸ್ಚಾರ್ಜ್ ಮಾಡಿದ್ದರಂತೆ.
ಬೇವಿನ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜಗಳಿದೆ ಗೊತ್ತಾ..?
ಅದ್ರೇ ಮನೆಗೆ ಹೋದ ಒಂದೇ ವಾರದಲ್ಲಿ ರೇಷ್ಮಾಗೆ ಆಯಾಸ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ಪರಿಣಾಮ ಮತ್ತೆ ರೇಷ್ಮಾಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರಂತೆ. ಸತತ 21 ದಿನಗಳ ಕಾಲ ನಿರಂತರವಾಗಿ ರೇಷ್ಮಾಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಬಾಣಂತಿ ರೇಷ್ಮಾ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.
ಹೆರಿಗೆಯಾಗಿ ಕೇವಲ 28 ದಿನಗಳ ಬಳಿಕ ಬಾಣಂತಿ ಸಾವನ್ನಪ್ಪಿದ್ದು, ಲಂಗ್ಸ್ ವೀಕ್, ಹಾರ್ಟ್ ವೀಕ್, ಕಿಡ್ನಿ ವೈಫಲ್ಯವಾಗಿ ಬಾಣಂತಿ ಸಾವಾಗಿದೆ ಅಂತಾ ವೈದ್ಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆದರೆ ಇದೆಲ್ಲ ಸುಳ್ಳು, ವೈದ್ಯರು ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ ಅಂತಾ ಕುಟುಂಬಸ್ಥರು ಆಕ್ರೋಶ ಪಡಿಸಿದ್ದಾರೆ.