ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಕಡಲೆ ಬೆಳೆ ಕ್ಷೇತ್ರೋತ್ಸವ ಏರ್ಪಡಿಸಲಾಗಿತ್ತು.ಬೆಳೆಗೆ ಮುಖ್ಯವಾಗಿರುವ ಮಣ್ಣಿಗೆ ಇಂದು ಪೋಷಕಾಂಶಗಳ ಬದಲಾಗಿ ಎನ್ಪಿಕೆಯನ್ನು ಅತಿಯಾಗಿ ಬಳಸಿ ಭೂಮಿಯ ಫಲವತ್ತತೆ ನಾಶವಾಗಲು ಕಾರಣವಾಗುತ್ತಿದ್ದಾರೆ. ಮಳೆ ನೀರಿನಿಂದ ಪ್ರತಿ ಎಕರೆಗೆ 5 ರಿಂದ 8 ಟನ್ ಮಣ್ಣು ಸವಕಳೆಯಾಗಿ ಹಾಳಾಗುತ್ತಿದೆ.
ಇದನ್ನು ತಡೆಯಲು ಕಷಿ ಹೊಂಡ, ಕ್ಷೇತ್ರ ಬದವು ನಿರ್ಮಾಣವಾದರೆ, ಮುಂದಿನ ಪೀಳಿಗೆಗೆ ಭೂಮಿಯ ಫಲವತ್ತತೆ ಉಳಿಸಬಹುದು ಎಂದರು. ಕೃಷಿ ಅಧಿಕಾರಿಗಳು ಈ ಸಂದರ್ಭದಲ್ಲಿಮಳೆಯಾಶ್ರಿತ ಭೂಮಿಗೆ ಕಷಿ ಹೊಂಡ ಯೋಜನೆ ಸೂಕ್ತ. ಹೊಂಡ ನಿರ್ಮಿಸಿಕೊಂಡು ಸ್ಪಂಕ್ಲರ್ನಿಂದ ನೀರುಣಿಸಿದರೆ ಉತ್ತಮ ಬೆಳೆ ಬೆಳೆಯಬಹುದು.
ಬೇವಿನ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜಗಳಿದೆ ಗೊತ್ತಾ..?
ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿ ಮಾಡಿರುವ ವಿಶ್ವ ಮುಖ್ಯ ಆರೋಗ್ಯ ಯೋಜನೆಯಡಿ ಮಣ್ಣು ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿ ವರದಿ ಬಂದ ನಂತರ ಮುಖ್ಯ ಆರೋಗ್ಯ ಚೀಟಿಯನ್ನು ರೈತರಿಗೆ ವಿತರಿಸಲಾಗುವುದು ಮಾಹಿತಿ ನೀಡಿದರು.
ಉಪ ಕೃಷಿ ನಿರ್ದೇಶಕ ಸಂದೀಪ ಜಿ.,
ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ, ಕೃಷಿ ಅಧಿಕಾರಿ ಎಂ.ಜಿ. ಜೋರಮ್ಮನವರ, ಸಹಾಯಕ ಕೃಷಿ ಅಧಿಕಾರಿ ಆರ್. ಜಂಬಗಿ, ಕೃಷಿ ವಿಶ್ವವಿದ್ಯಾಲಯ ವಿಜ್ಞಾನಿಗಳಾದ ಬಸವರಾಜ ಏಣಗಿ, ಗುರುಪಾದ ಬಿ., ವಾಲ್ಮೀ ಸಂಸ್ಥೆಯ ಪ್ರವಿಣ ದೊಡ್ಡಮನಿ, ಗ್ರಾಮದ ಮಲ್ಲಿಕಾರ್ಜುನ ಹೊರಕೇರಿ, ಕಲ್ಲನಗೌಡ ಪಾಟೀಲ, ಕರಬಸಪ್ಪ ಬೆಟಗೇರಿ, ಶಿವಪ್ಪ ಹೊರಕೇರಿ, ಗದಿಗೆಯ್ಯ ಹಿರೇಮಠ, ಸಂತೋಷ ಸೋಗಿ ಇತರರು ಉಪಸ್ಥಿತರಿದ್ದರು.