ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿರೋದಕ್ಕೆ ಎಲ್ಲರ ಸಹಮತ ಇದೆ. ಯಾರಿಗೂ ಭಿನ್ನಮತ ಇಲ್ಲ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ನಗರದಲ್ಲಿ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಇರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,
ಸಿದ್ದರಾಮಯ್ಯರನ್ನ ಆಯ್ಕೆ ಮಾಡುವಾಗ 1 ವರ್ಷ, 2 ವರ್ಷ, 3 ವರ್ಷ ಅಂತ ಆಯ್ಕೆ ಮಾಡಿಲ್ಲ. ಸಿದ್ದರಾಮಯ್ಯ ಸಿಎಂ ಆಗಿರೋದಕ್ಕೆ ಎಲ್ಲರ ಸಹಮತ ಇದೆ. ಯಾರಿಗೂ ಭಿನ್ನಮತ ಇಲ್ಲ ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು. ಡಿಕೆಶಿ ಸಿಎಂ ಆಗಬೇಕು ಎಂದು ಅಭಿಮಾನಿಗಳು ಹೇಳುತ್ತಾರೆ.
ನಿಮ್ಮ ಕನಸಲ್ಲಿ ಯಾರಾದ್ರು ಮೃತಪಟ್ಟಂತೆ ಕಾಣಿಸಿಕೊಂಡ್ರೆ ಏನಾಗುತ್ತೆ..? ಇದರ ಹಿಂದಿದೆ ಸ್ಫೋಟಕ ರಹಸ್ಯ!
ಅದಕ್ಕೆ ಡಿಕೆಶಿ ಏನು ಮಾಡಲು ಆಗುತ್ತದೆ. ಹೈಕಮಾಂಡ್ ಏನು ಮಾಡೋಕಾಗುತ್ತೆ? ನಾವೇನು ಮಾಡೋದು? ಸಿಎಂ ಬದಲಾವಣೆ ಪ್ರಶ್ನೆ ಹೈಕಮಾಂಡ್ ಮುಂದೆಯೂ ಇಲ್ಲ. ಶಾಸಕಾಂಗ ಸಭೆಯ ಮುಂದೆಯೂ ಚರ್ಚೆ ಆಗುತ್ತಿಲ್ಲ. ಹೈಕಮಾಂಡ್ ಹೇಳಿದ ಮೇಲೆ ಮಾತನಾಡುತ್ತಿದ್ದಾರೆ ಅಂದರೆ ಹೈಕಮಾಂಡ್ ಕ್ರಮ ತೆಗೆದುಕೊಳ್ಳಬೇಕು. ನಮ್ಮ ಹೈಕಮಾಂಡ್ ಸ್ಟ್ರಾಂಗ್ ಇದೆ. ಈಗ ಮತ್ತಷ್ಟು ಸ್ಟ್ರಾಂಗ್ ಆಗಿದೆ ಎಂದು ಹೇಳಿದರು.