ಹುಬ್ಬಳ್ಳಿ; ಧಾರವಾಡ ನಗರದ ಯಾಲಕ್ಕಿಶೆಟ್ಟರ ಕಾಲೋನಿಯ ಸಾಫಲ್ಯ ಯೋಗ ಬಳಗದ ಸದಸ್ಯರು ರಥಸಪ್ತಮಿ ದಿನದ ಅಂಗವಾಗಿ ಸೂರ್ಯ ದೇವರಿಗೆ ೧೦೮ ಸೂರ್ಯ ನಮಸ್ಕಾರ ಮಾಡುವ ಮೂಲಕ ರಥಸಪ್ತಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ಸಾಫಲ್ಯ ಯೋಗ ಬಳಗದ ಯೋಗ ಪಟುಗಳಾದ ವಿರೇಶ ಕೆಲಗೇರಿ,ನಾಗರಾಜ ಎಲಿಗಾರ, ವೆಂಕಟೇಶಶಿವಪೂಜೆ,ಚಿಕ್ಕಮಠ,ಕುಲಕರ್ಣಿ, ಶ್ರೀಮತಿ ಭಾರತಿ ಹೂಗಾರ, ಸುಮನ ಕೆಲಗೇರಿ, ದೀಪಾ ಅಂಗಡಿ,ಸುಮಾ,ಅಶ್ವಿನಿ,ಸವಿತಾ ಪಟೇಲ,ಲಲಿತಾ ಉಡಪಿ ಮತ್ತು ಅನೇಕ ಸದಸ್ಯರು ಪಾಲ್ಗೊಂಡಿದ್ದರು.
ಸುಮಾರು ೩೫ ಯೋಗ ಪಟುಗಳು ಮುಂಜಾನೆ ಸರಿಯಾಗಿ ೫.೪೫ ಕ್ಕೆ ಗಿಡಕ್ಕೆ ನೂರು ಹಾಕುವ ಮುಖಾಂತರ ಒಂದು ತಾಸು ೧೦೮ ಸೂರ್ಯ ನಮಸ್ಕಾರ ಮಾಡಿದರು.