ಕಲಬುರಗಿ: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಗೆ ತೀವ್ರ ಪೈಪೋಟಿ ತೀವ್ರಗೊಂಡಿದ್ದು, ವಾಕ್ಸಮರ ಮುಂದುವರೆದಿದೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಮತ್ತೊಂದು ಅವಧಿಗೆ ನಾನೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತೇನೆ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ, ಮೊದಲು ರಾಜ್ಯಧ್ಯಕ್ಷ ಸ್ಥಾನಕ್ಕೆ ಚುನಾವಣೆಯಾಗಲಿ. ಅಲ್ಲಿಯವರೆಗೂ ಕೈ ಮುಗಿದುಕೊಂಡು ಓಡಾಡಲಿಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಯತ್ನಾಳ್ ಟಾಂಗ್ ನೀಡಿದರು.ʼ
ನಮ್ಮಲ್ಲಿ ತೀರ್ಮಾನ ಮಾಡಿ ಕ್ಯಾಂಡೆಟ್ ಹಾಕ್ತೆವೆ. ಲಿಂಗಾಯತ ಕೋಟಾ ಬಂದ್ರೆ I am ready. ನಮಗೆ ಎಲ್ಲಾ ರಾಷ್ಟ್ರೀಯ ನಾಯಕರು ಸಮಯ ನೀಡಿದ್ದಾರೆ. ಸುಮ್ಮನೆ ನಾವೇನು ದೆಹಲಿಗೆ ಹೋಗೋಕೆ ಹುಚ್ಚರಾ…? ಯಾರು ತೆಲೆ ಕೆಡಿಸಿಕೊಳ್ಳಬೇಡಿ ಎಲ್ಲ ಒಳೆಯದಾಗುತ್ತೆ. ವಿಜಯೇಂದ್ರ ಹೋದ್ರೆ ನಾಲ್ಕೈದು ದಿನದಲ್ಲಿ ಪಾರ್ಟಿಯಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ. ನಮ್ಮದು ಮೂರು ಅಜೆಂಡಾವಿದೆ ಹಿಂದುತ್ವ,ಕುಟುಂಬ ರಾಜಕಾರಣ,ಭ್ರಷ್ಟಾಚಾರ ವಿರುದ್ದ ನಮ್ಮ ಹೋರಾಟ ವಿಚಾರಕ್ಕೆ ಕೇಂದ್ರದ ನಾಯಕರು ಇದಕ್ಕೆ ಉತ್ತರ ನೀಡಬೇಕು. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತೀರಿ. ಇಲ್ಲಿ ಯಡಿಯೂರಪ್ಪ ಮಗನ್ನ ಅಧ್ಯಕ್ಷ ಮಾಡಿದ್ದೀರಿ. ಹೀಗೆಲ್ಲಾ ಮಾಡೋದಿದ್ದರೇ ಇನ್ಮೇಲೆ ಕುಟುಂಬ ರಾಜಕಾರಣ,ಭ್ರಷ್ಟಾಚಾರ,ಹಿಂದುತ್ವ ಬಗ್ಗೆ ಮಾತನಾಡಬೇಡಿ ಅಂತಾ ಕಿಡಿಕಾರಿದರು.