ಬೆಂಗಳೂರು: ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ನಾನು ಚರ್ಚೆ ಮಾಡಲು ಇಷ್ಟ ಪಡುವುದಿಲ್ಲ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಪರಿಷತ್ ಸದಸ್ಯ ಸಿಟಿ ರವಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ನಾನು ಚರ್ಚೆ ಮಾಡಲು ಇಷ್ಟ ಪಡುವುದಿಲ್ಲ. ಈಗ ನಡೆಯುತ್ತಿರುವ ಬೆಳವಣಿಗೆಗಳು ಲಕ್ಷಾಂತರ ಕಾರ್ಯಕರ್ತರಿಗೆ ನನ್ನನ್ನು ಸೇರಿ ದುಃಖ ತಂದಿದೆ.
ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡು ಆಲೋಚನೆ ಮಾಡುವ ಅವಶ್ಯಕತೆ ಇದೆ. ಎಷ್ಟೋ ಜನ ತಮ್ಮ ಜೀವನವನ್ನು ಕೊಟ್ಟು, ಮನೆ ಮಠ ಹಾಳು ಮಾಡಿಕೊಂಡು ಪಕ್ಷದ ಬೆಳವಣಿಗೆಗೆ ಕೆಲಸ ಮಾಡಿದ್ದಾರೆ.ಅಧಿಕಾರ ಮರಿಚಿಕೆಯಾಗಿದ್ದ ಕಾಲದಲ್ಲಿ ದುಡಿದ್ದಾರೆ. ಕಾಂಗ್ರೆಸ್ ಇವತ್ತು ಜನ ವಿರೋಧಿಯಾಗಿ ಕೆಲಸ ಮಾಡುತ್ತಿದೆ.
New recharge plan: ಈ ರೀಚಾರ್ಜ್ ಮಾಡಿದ್ರೆ ಒಂದು ವರ್ಷ ನೆಮ್ಮದಿ..! ಇದುವೇ ನೋಡಿ BSNLನ ಸೂಪರ್ ರೀಚಾರ್ಜ್ ಪ್ಲ್ಯಾನ್
ನಿತ್ಯ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಸಾವು ತಪ್ಪಿದ್ದಿಲ್ಲ. ಕಳಪೆ ಔಷಧಿ ಕಾರಣಕ್ಕೆ ಬಾಣಂತಿಯರು, ಮಕ್ಕಳು ಸಾಯ್ತಿದ್ದಾರೆ. ಅಭಿವೃದ್ಧಿ ನಿಂತ ಸ್ಥಿತಿಯಲ್ಲಿ ನಿಂತಿದೆ. ಆಡಳಿತ ಪಕ್ಷದವರಿಗೆ ಅಸಹನೆ ನಿರ್ಮಾಣ ಮಾಡಿದೆ. ನಾವು ಇಂತಹ ಸಮಯದಲ್ಲಿ ಜನರ ಪರವಾಗಿ ಹೋರಾಟ ಮಾಡಬೇಕು.ನಮ್ಮ ಕರ್ತವ್ಯ ಜನರ ಪರ ಹೋರಾಟ ಮಾಡೋದಾಗಿತ್ತು. ಆದರೆ ನಾವು ಮಾಡ್ತಿಲ್ಲ ಅಂತ ಆಕ್ರೋಶ ಹೊರ ಹಾಕಿದರು.