ಬೆಂಗಳೂರು: ಅವರಿಬ್ಬರು 12 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಈ ಪ್ರೀತಿಗೆ ಸಾಕ್ಷಿಯಾಗಿ ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳು ಜನಿಸಿದ್ದರು. 12 ವರ್ಷದ ಹಿಂದೆ ಮದುವೆ ಆಗಿದ್ದ ಇವರು ಮೂರ್ನಾಲ್ಕು ವರ್ಷ ಬಹಳ ಅನನ್ಯವಾಗಿ ಇದ್ದರು. ನಂತರ ಗಂಡನಿಗೆ ಮೂಡಿದ ಅನುಮಾನ ಇವತ್ತು ಹೆಂಡತಿಯ ಕೊಲೆ ವರೆಗೆ ಹೋಗಿದೆ ಇವರಿಬ್ಬರ ಈ ವೈಮನಸ್ಸು ಇಂದು ಮೂವರು ಮಕ್ಕಳು ಬೀದಿಗೆ ಬಂದಂತಾಗಿದೆ ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್…
ಹೌದು ಈ ಘನ ಘೋರ ಘಟನೆ ನಡೆದಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ತಮ್ಮರಸನಹಳ್ಳಿ ಗ್ರಾಮದಲ್ಲಿ. ಮೂಲತಃ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ನಿಜಾಮುದ್ದೀನ್ ಮತ್ತು ರಾಬೀಯಾ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಒಂದು ಗಂಡು ಮತ್ತು ಇಬ್ಬರು ಗಂಡು ಮಕ್ಕಳಿದ್ದರು. ಮೂರ್ನಾಲ್ಕು ವರ್ಷ ಮದುವೆಯಾದ ಮೇಲೆ ಅನನ್ಯವಾಗಿದ್ದರು. ನಂತರ ಹೆಂಡತಿ ರಾಬೀಯಾ ಮೇಲೆ ನಿಜಾಮುದ್ದೀನ್ ಗೆ ಅನುಮಾನ ಮೂಡಿತ್ತು. ಅನೈತಿಕ ಸಂಬಂಧದ ಅನುಮಾನ ಮೂಡಿದ ಗಂಡ ಹೆಂಡತಿಗೆ ದಿನನಿತ್ಯ ಕಿರುಕುಳ ನೀಡಿದ್ದಾನೆ ಜೊತೆಗೆ ವರದಕ್ಷಿಣೆ ತರುವಂತೆ ಪೀಡಿಸಿದ್ದಾನೆ.
New recharge plan: ಈ ರೀಚಾರ್ಜ್ ಮಾಡಿದ್ರೆ ಒಂದು ವರ್ಷ ನೆಮ್ಮದಿ..! ಇದುವೇ ನೋಡಿ BSNLನ ಸೂಪರ್ ರೀಚಾರ್ಜ್ ಪ್ಲ್ಯಾನ್
ಇನ್ನೂ ಹೀಗೆ ಹಲವು ವರ್ಷಗಳಿಂದ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ನಿಜಾಮುದ್ದೀನ್ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದಿಂದ ಹೊಸಕೋಟೆ ತಾಲ್ಲೂಕಿನ ತಮ್ಮರಸನಹಳ್ಳಿ ಗ್ರಾಮಕ್ಕೆ ಹೋಗಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ. ನಿನ್ನೆ ಹೆಂಡತಿ ರಾಬೀಯಾಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಸುಮಾರು ರಾತ್ರಿ 10 ಗಂಟೆಗೆ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಗೆ ಬಂದಿದ್ದಾನೆ. ಸೂಲಿಬೆಲೆಯಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿರುವ ನಿಜಾಮುದ್ದೀನ್ ಹೆಂಡತಿಯ ವೆಲ್ ಮೂಲಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ನಂತರ ತಾನೇ ಸೂಲಿಬೆಲೆ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಒಟ್ಟಾರೆ ಪ್ರೀತಿಸಿ ಮದುವೆಯಾದ ಇಬ್ಬರಿಬ್ಬರು ಅನೇಕರಿಗೆ ಮಾದರಿಯಾಗಿ ಜೀವನ ನಡೆಸಬೇಕಿತ್ತು. ಕೊಲೆ ಮಾಡುವ ಮೊದಲು ತನ್ನ ಮೂರು ಮಕ್ಕಳ ಬಗ್ಗೆ ಗಂಡ ನಿಜಾಮುದ್ದೀನ್ ಯೋಚನೆ ಮಾಡಬೇಕಿತ್ತು. ಅನುಮಾನದಿಂದ ಹೆಂಡತಿ ರಾಬೀಯಾಳನ್ನು ಕೊಲೆ ಮಾಡಿರುವುದು ಶೋಚನೀಯ. ಸದ್ಯಕ್ಕೆ ಮೂರು ಮಕ್ಕಳ ಜೀವನ ಹೇಗೆ ಎಂಬುದು ಇದೀಗ ಪ್ರಶ್ನೆಯಾಗಿದೆ.