ಪುಷ್ಪ ಸಿನಿಮಾದ ಬಳಿಕ ನಟ ಅಲ್ಲು ಅರ್ಜುನ್ ನ್ಯಾಷನಲ್ ಸ್ಟಾರ್ ಆಗಿ ಮಿಂಚಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಪುಷ್ಪ 2’ ಸಿನಿಮಾ ಅಲ್ಲು ಅರ್ಜುನ್ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದೆ. ಆದರೆ ಚಿತ್ರದ ಪ್ರೀರಿಲೀಸ್ ಈವೆಂಟ್ ನಲ್ಲಿ ನಡೆದ ಘಟನೆಯಿಂದ ಅಲ್ಲು ಅರ್ಜುನ್ ಸಾಕಷ್ಟು ನೊಂದಿದ್ದರು. ಈ ಘಟನೆಯಿಂದ ಅಲ್ಲು ಅರ್ಜುನ್ ಅವರು ಎಚ್ಚೆತ್ತುಕೊಂಡಿದ್ದಾರೆ. ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ತಪ್ಪು ಮಾಹಿತಿ ರವಾನೆ ಆಗಬಾರದು ಎನ್ನುವ ಕಾರಣಕ್ಕೆ ವಿಶೇಷ ಹುದ್ದೆ ಸ್ಥಾಪಿಸುತ್ತಿದ್ದಾರೆ.
ಸಾಮಾನ್ಯವಾಗಿ ಪಕ್ಷಗಳಿಗೆ ಅಥವಾ ಸಂಘಗಳಿಗೆ ವಕ್ತಾರರು ಇರುತ್ತಾರೆ. ಮಾಧ್ಯಮಗಳ ಜೊತೆ ಈ ವಕ್ತಾರರೇ ಮಾತನಾಡುತ್ತಾರೆ. ಈಗ ಅಲ್ಲು ಅರ್ಜುನ್ ಕೂಡ ವಕ್ತಾರರನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈಗ ಅವರು ವಕ್ತಾರರನ್ನು ನೇಮಿಸಲಿದ್ದು, ಅಲ್ಲು ಅರ್ಜುನ್ ಬಗ್ಗೆ ಹಾಗೂ ಅವರ ಸಿನಿಮಾಗಳ ಬಗ್ಗೆ ವಕ್ತಾರರೇ ಮಾಹಿತಿ ನೀಡಲಿದ್ದಾರೆ.
ಅಲ್ಲು ಅರ್ಜುನ್ ವಕ್ತಾರರು ಅವರ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಾರೆ. ಅಲ್ಲು ಅರ್ಜುನ್ ಬಗ್ಗೆ ಯಾವುದೇ ವಿಚಾರ ಬಂದರೂ ಅವರೇ ಉತ್ತರ ನೀಡುತ್ತಾರೆ. ಈ ಮೂಲಕ ಅಲ್ಲು ಅರ್ಜುನ್ಗೆ ಮಾಧ್ಯಮದ ಎದುರು ಬರೋದು ಕೂಡ ತಪ್ಪಲಿದೆ. ಮಾರ್ಚ್ನಿಂದ ಇದು ಜಾರಿಗೆ ಬರೋ ಸಾಧ್ಯತೆ ಇದೆ. ‘ತಾಂಡೇಲ್’ ಚಿತ್ರದ ಪ್ರಚಾರದ ವೇಳೆ ಅಲ್ಲು ಅರ್ಜುನ್ ಆಪ್ತ, ನಿರ್ಮಾಪಕ ಬನ್ನಿ ವಾಸ್ ಈ ವಿಚಾರ ತಿಳಿಸಿದ್ದಾರೆ.