ಮಂಡ್ಯ: ವಿಸಿ ನಾಲೆಗೆ ಕಾರು ಬಿದ್ದ ಪ್ರಕರಣದಲ್ಲಿ ಮತ್ತೊಬ್ಬರ ಶವ ಪತ್ತೆಯಾಗಿದ್ದು,ಮೃತರ 3ಕ್ಕೆ ಏರಿಕೆಯಾಗಿದೆ. ಸೋಮವಾರ ವಿಸಿ ನಾಲೆಗೆ ಕಾರು ಬಿದಿದ್ದು, ನಾಪತ್ತೆಯಾಗಿದ್ದ ಪೀರ್ಖಾನ್ ಶವ ತಿಬ್ಬನಹಳ್ಳಿ ಬಳಿಯ ವಿಸಿ ಕೆನಾಲ್ ಬಳಿ ಪತ್ತೆಯಾಗಿದೆ.
ಸೋಮವಾರ ಸಂಜೆಯವರೆಗೂ ಮೃತದೇಹ ಪತ್ತೆಯಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದರು. ನಾಲೆಯಲ್ಲಿ ನೀರು ಸ್ಥಗಿತಗೊಂಡ ಹಿನ್ನೆಲೆ ಮಂಗಳವಾರ ಕಾರ್ಯಾಚರಣೆ ಮುಂದುವರಿಸಿದ್ದರು. ಈ ವೇಳೆ ನಾಲೆಯಲ್ಲಿ ಫೀರ್ ಖಾನ್ ಶವ ಪತ್ತೆಯಾಗಿದೆ. ಇನ್ನೂ ಬದುಕುಳಿದ ನಯಾಜ್ಗೆ ಮಂಡ್ಯ ಮಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಯಾಜ್ ಅವರಿಗೆ ಕುತ್ತಿಗೆಗೆ ತೀವ್ರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾಘಟಕದಲ್ಲಿಡಲಾಗಿದೆ.
ಇನ್ನೂ ಇದೇ ಪ್ರಕರಣದ ಸಂಬಂಧ ಮಾತನಾಡಿರುವ ಮೇಲಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗಂಭೀರ ಆರೋಪ ಮಾಡಿದ್ದು, ಪಿಡಬ್ಲ್ಯೂಡಿ ರಸ್ತೆ ಬಿಟ್ಟು ವಿಸಿ ನಾಲೆಯ ಸರ್ವಿಸ್ ರಸ್ತೆಗೆ ಡಾಂಬರ್ ಹಾಕಿಸಿದ್ದಾರೆ. ವಿಸಿ ನಾಲೆಯಿಂದ 200 ಮೀಟರ್ ರಸ್ತೆ ಬಿಟ್ಟು PWD ರಸ್ತೆ ಮಾಡಬೇಕಿತ್ತು. ರಸ್ತೆ ಅಗಲೀಕರಣ ಕಾಮಗಾರಿ ಸಂದರ್ಭದಲ್ಲೆ ಕ್ರಾಸ್ ಬ್ಯಾರಿಯರ್ ಹಾಕಬೇಕಿತ್ತು. ಆಧರೆ ಕಾಮಗಾರಿ ಪೂರ್ಣವಾಗದೇ ಗುತ್ತಿಗೆದಾರ ಬಿಲ್ ಪಡೆದುಕೊಂಡಿರುವ ಸಂಶಯ ಇದೆ. ಗುತ್ತಿಗೆದಾರ, ಅಧಿಕಾರಿಗಳಿಂದ ಭ್ರಷ್ಟ ಕಾಮಗಾರಿ ನಡೆಸಿರುವ ಬಗ್ಗೆ ಆರೋಪಿಸಿದ್ದಾರೆ.