ಗದಗ : ರಾಜ್ಯದಲ್ಲಿ ಸರ್ಕಾರ ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ತಡೆ ನೀಡಲು ಸುಗ್ರೀವಾಜ್ಞೆ ಜಾರಿಗೆ ಮುಂದಾಗಿದೆ. ಆದ್ರೂ ಕೂಡ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮಾತ್ರ ತಮ್ಮದೇ ಚಾಳಿ ಮುಂದುವರೆಸಿದ್ದಾರೆ. ಸರ್ಕಾರ ಅಷ್ಟೆಲ್ಲಾ ವಾರ್ನ್ ಕೊಟ್ಟಿದರೂ ಕೂಡ ಗದಗ ಜಿಲ್ಲೆಯಲ್ಲಿ ದಂಗೆಕೋರರ ಕಿರುಕುಳ ಮಾತ್ರ ಇನ್ನೂ ನಿಲ್ಲುತ್ತಿಲ್ಲ. ಕೇವಲ ಹತ್ತೇ ಸಾವಿರ ರೂಪಾಯಿಗೆ ವೃದ್ಧೆಯ ಮನೆಗೆ ಬೀಗ ಹಾಕಿರುವಂಥ ಘಟನೆಯೊಂದು ನಡೆದಿದೆ.
ಜಿಲ್ಲೆಯ ರೋಣ ಪಟ್ಟಣದ ಶಾಂಭವರ ಚಾಳದಲ್ಲಿ ನಡೆದ ಘಟನೆ ನಡೆದಿದ್ದು, ಉಷಾದೇವಿ ಗುರುದೇವಯ್ಯ ಶಾಂತಸ್ವಾಮಿಮಠ (65) ಎಂಬುವರ ಮನೆಗೆ ಬೀಗ ಜಡಿದಿದ್ದು, ವೃಧ್ದೇಯನ್ನು ಮನೆಯಿಂದ ಹೊರ ಹಾಕಿದ್ದಾರೆ. ಸಹೋದರನ ಚಿಕಿತ್ಸೆಗಾಗಿ ಪಡೆದಿದ್ದ ಉಷಾದೇವಿ ಮೌಲಾಸಾಬ್ ಬೆಟಗೇರಿ ಎಂಬುವರ ಬಳಿ 10 ಸಾವಿರ ರೂ ಪಡೆದಿದ್ದರು. ಕಾಲಾವಕಾಶ ಕೊಡಿ ಅಂದ್ರು ಕೇಳದ ಬಡ್ಡಿ ದಂಧೆಕೋರ ಮೌಲಾಸಾಬ್, ವೃದ್ದೆಯನ್ನು ಹೊರಹಾಕಿ ಮನೆಗೆ ಬೀಗ ಜಡಿದಿದ್ದಾರೆ. ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.