ಬೆಂಗಳೂರು: ಬೆಂಗಳೂರಿನ ಪೊಲೀಸ್ ಪೇದೆ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ನಡೆಸಿರೋ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಲಾಗಿದೆ. ಹೌದು ಮಹಿಳೆಗೆ ಕಿರುಕುಳ ಆರೋಪ ಸಂಬಂಧ ಕಾನ್ಸ್ ಟೇಬಲ್ ವಿರುದ್ದ ಎಫ್ ಐಆರ್ ದಾಖಲು ಮಾಡಲಾಗಿದೆ. ಇಂದಿರಾನಗರ ಕಾನ್ಸ್ ಟೇಬಲ್ ಮನೋಜ್ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ.
ರೇಖಾ ಎಂಬ ಮಹಿಳೆ ನಿಂಗರಾಜ್ ಎಂಬುವರ ಜೊತೆ ವಿವಾಹವಾಗಿದ್ದು,ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಮಹಿಳೆಯ ಗಂಡ ಅಪಘಾತದಲ್ಲಿ ಮೃತ ಪಟ್ಟ ಬಳಿಕ ದೂರಿನ ವಿಚಾರವಾಗಿ ಪೊಲೀಸ್ ಠಾಣೆಗೆ ಹೋಗಿದ್ದರು. ಇದೇ ವೇಳೆ ಪೊಲೀಸ್ ಠಾಣೆಯಲ್ಲಿ ಮನೋಜ್ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಬಳಿಕ ಪ್ರೀತಿಸಿ ಕಾನ್ಸ್ ಟೇಬಲ್ ಮನೋಜ್ ಮಹಿಳೆಯನ್ನು ಮದುವೆಯಾಗಿದ್ದರು.
Pumpkin Seeds: ನಿಮಗೆ ಗೊತ್ತೆ..? ಕುಂಬಳಕಾಯಿ ಬೀಜಗಳಿಂದ ನಿವಾರಣೆಯಾಗುತ್ತೆ ಈ ಸಮಸ್ಯೆಗಳು!
ರೇಖಾ, ಮನೋಜ್ ವಸಂತನಗರದ ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಾಗಿದ್ದರು. ಇದೀಗ ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ನಡೆಸಿರೋ ಆರೋಪ ಕೇಳಿಬಂದಿದೆ. ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಲಾಗಿದ್ದು, ಸದ್ಯ ಪೊಲೀಸರು ಕಾನ್ಸ್ ಟೇಬಲ್ ಮನೋಜ್ ಗೆ ನೋಟಿಸ್ ನೀಡಿದ್ದಾರೆ.