ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ 11’ರ ವಿನ್ನರ್ ಆಗಿರೋ ಹನುಮಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾನೆ. ಹನುಮಂತ ಬಿಗ್ ಬಾಸ್ ವಿನ್ನರ್ ಆಗುತ್ತಿದ್ದಂತೆ ನಿರ್ದೇಶಕರು ಹಾಗೂ ನಿರ್ಮಾಪಕರು ಆತನನ್ನ ಅರಸಿಕೊಂಡು ಹೋಗ್ತಿದ್ದಾರೆ. ಆದ್ರೆ ಇದ್ಯಾವುದಕ್ಕೂ ಡೋಂಟ್ ಕೇರ್ ಎಂದ ಹನುಮಂತ ಸಿನಿಮಾದಲ್ಲಿ ನಟಿಸಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾನೆ.
ಬಿಗ್ ಬಾಸ್ನಲ್ಲಿ ಗೆದ್ದ ಬಳಿಕ ಹನುಮಂತಗೆ ಹಲವು ಸಿನಿಮಾಗಳಿಂದ ಆಫರ್ ಗಳು ಬರ್ತಿವೆ. ಆದರೆ ಕಿರುತೆರೆ ಹೊರತು ಸಿನಿಮಾ ಸಹವಾಸವೇ ಬೇಡವೆಂಬ ತೀರ್ಮಾನಕ್ಕೆ ಬಂದಿದ್ದಾರೆ ಹನುಮಂತ. ಒಂದಾದ್ಮೇಲೊಂದು ರಿಯಾಲಿಟಿ ಶೋ ಮಾಡ್ತಿರುವ ಹನುಮಂತ ಟಿವಿ ಮೂಲಕ ಜನರ ಪ್ರೀತಿ ಗಳಿಸಿಕೊಳ್ತಿದ್ದಾರೆ.
ದೊಡ್ಮನೆಯಿಂದ ಹೊರ ಬಂದಾದ್ಮೇಲೆ ಮದುವೆ ಹಾಗೂ ಮನೆ ಕಟ್ಟಬೇಕು ಎಂದು ಪ್ಲ್ಯಾನ್ ಮಾಡಿದ್ದಾರೆ. ಕುಟುಂಬಕ್ಕೆ ಹೆಚ್ಚು ಗಮನ ನೀಡುತ್ತಿದ್ದಾರೆ. ಹೀಗಾಗಿ ಸಿನಿಮಾ ಆಫರ್ಗಳು ಬಂದರೂ ಸಹ ಹನುಮಂತ ನಯವಾಗಿಯೇ ನಿರಾಕರಿಸುತ್ತಿದ್ದಾರೆ.