ಹಾಸನ : ಕಳೆದ ಜ.29ರಂದು ಹಾಸನ ನಗರದಲ್ಲಿ ಕಳ್ಳತನವಾಗಿದ್ದ ಎಟಿಎಂ ಮಿಷನ್ ನಾಲೆಯಲ್ಲಿ ಪತ್ತೆಯಾಗಿದೆ. ಹಾಸನ ಹೊರವಲಯದ ಶಂಕರನಹಳ್ಳಿ ಗ್ರಾಮದ ಬಳಿಯಿರುವ ಚಾನಲ್ನಲ್ಲಿ ಎಟಿಎಂ ಮಿಷಿನ್ ಪತ್ತೆಯಾಗಿದೆ.
ಕಳೆದ ಜ.29 ರಂದು ಹನುಮಂತಪುರದಲ್ಲಿ ಖದೀಮರು, ಹಣದ ಸಮೇತ ಇಂಡಿಯಾ ಒನ್ ಎಟಿಎಂ ಮಿಷನ್ ಕದ್ದೊಯ್ದಿದ್ದರು. ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇದ್ದ ಎಟಿಎಂ ಮಿಷಿನ್ ಕದ್ದು ಪರಾರಿಯಾಗಿದ್ದರು. ಅದರಲ್ಲಿದ್ದ ಹಣ ತೆಗೆದುಕೊಂಡು ಎಟಿಎಂ ಮಿಷನ್ನನ್ನು ಬಿಸಾಡಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.