ಕೇರಳ: ಅಂಗನವಾಡಿ ಊಟದಲ್ಲಿ ಉಪ್ಮಾ ಬದಲು ಬಿರಿಯಾನಿ ಮತ್ತು ಚಿಕನ್ ಫ್ರೈ ಕೇಳುವ ಮಗುವಿನ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಗಮನ ಸೆಳೆದಿತ್ತು. ಬಾಲಕನ ಈ ಮಾತನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ವೀಣಾ ಜಾರ್ಜ್ ಮಗುವಿನ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ವೀಣಾ ಜಾರ್ಜ್ ಶಂಕು ಎಂಬ ಮಗು ತುಂಬಾ ಮುಗ್ಧವಾಗಿ ಒಂದು ಮನವಿಯನ್ನು ಮಾಡಿಕೊಂಡಿದೆ. ಇದನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಲಿದೆ ಎಂದು ಹೇಳಿದ್ದಾರೆ. ಮಗು ಶಂಕುವಿಗೆ, ಅವರ ತಾಯಿಗೆ ಹಾಗೂ ಅಂಗನವಾಡಿ ಸಿಬ್ಬಂದಿಗೆ ಸಂದೇಶ ನೀಡಿರುವ ಸಚಿವೆ,
Tulsi Plant: ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತಾಗುತ್ತೆ? ಇಲ್ಲಿದೆ ಮಾಹಿತಿ
ಅಂಗನವಾಡಿಗೆ ನೀಡಲಾಗುವ ಆಹಾರದ ಮೆನುವನ್ನು ಪರಿಶೀಲಿಸಲಾಗುವುದು, ಶಂಕುವಿನ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ನಾವು ಅಂಗನವಾಡಿಗೆ ಅನೇಕರ ರೀತಿಯ ಪೌಷ್ಠಿಕಾಂಶ ನೀಡುವ ಆಹಾರವನ್ನು ನೀಡುತ್ತಿದ್ದೇವೆ. ಈಗ ಮಗು ಈ ಮನವಿಯನ್ನು ಮಾಡಿಕೊಂಡಿದ್ದು ಇದನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಮ್ಮ ಸರ್ಕಾರದ ಯೋಜನೆಯಲ್ಲಿ ಅಂಗನವಾಡಿಗೆ ಮೊಟ್ಟೆ ಮತ್ತು ಹಾಲನ್ನು ಪೂರೈಸುವ ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ, ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಈಗಾಗಲೇ ವಿವಿಧ ರೀತಿಯ ಆಹಾರವನ್ನು ಅಂಗನವಾಡಿ ಮಕ್ಕಳಿಗೆ ಸರ್ಕಾರ ನೀಡುತ್ತಿದೆ ಎಂದು ಜಾರ್ಜ್ ಹೇಳಿದ್ದಾರೆ.