ಬೆಂಗಳೂರು: ಪಕ್ಷದ ಬಿಕ್ಕಟ್ಟುಗಳು ಅತಿ ಶೀಘ್ರದಲ್ಲಿ ಕೊನೆಗಾಣಲಿವೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಹಾಗೆ ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಬಣ ಬಡಿದಾಟವೇನೂ ನಡೆದಿಲ್ಲ, ಪಕ್ಷದ ಅಧ್ಯಕ್ಷ ಸ್ಥಾನ ಅಧಿಕಾರದ ಸ್ಥಾನವಲ್ಲ, ಅದು ಸಂಘಟನೆಯ ಸ್ಥಾನ ಎಂದರು.
Tulsi Plant: ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತಾಗುತ್ತೆ? ಇಲ್ಲಿದೆ ಮಾಹಿತಿ
ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ 60-70 ಶಾಸಕರು ಮಿನಿಸ್ಟ್ರಾಗಳಾಗಲು ಬಡಿದಾಡುತ್ತಿದ್ದಾರೆ, ಮುಖ್ಯಮಂತ್ರಿ ಸ್ಥಾನಕ್ಕೆ ಕಚ್ಚಾಟ ಅಲ್ಲಿ ಶುರುವಾಗಿದೆ, ಆದರೆ ಬಿಜೆಪಿಯಲ್ಲಿ ಸಂಘಟನೆಗಾಗಿ ಪೈಪೋಟಿ ನಡೆಯುತ್ತಿದೆ, ಯಾವುದೇ ಪಕ್ಷದ ಅಧ್ಯಕ್ಷ ಸ್ಥಾನ ಅಧಿಕಾರದ ಸ್ಥಾನವಲ್ಲ ಎಂದು ನಾರಾಯಣಸ್ವಾಮಿ ಹೇಳಿದರು.