ಬೆಂಗಳೂರು:- ಫುಡ್ ತಡವಾಗಿ ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ರೆಸ್ಟೋರೆಂಟ್ ಸಿಬ್ಬಂದಿಯಿಂದ ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆದ ಆರೋಪ ಕೇಳಿ ಬಂದಿರುವ ಘಟನೆ ಹೆಸರಘಟ್ಟ ರಸ್ತೆಯ ಗಬ್ರು ಬ್ರಿಸ್ಟೋ ಆ್ಯಂಡ್ ಕೆಫೆ ರೆಸ್ಟೋರೆಂಟ್ನಲ್ಲಿ ಜರುಗಿದೆ.
ಡೆಲಿವರಿ ಬಾಯ್ಯೊಬ್ಬ ರೆಸ್ಟೋರೆಂಟ್ನಿಂದ ಫುಡ್ ಪಡೆದು ಡೆಲಿವರಿ ಮಾಡಬೇಕಿತ್ತು. ಆದರೆ ಅರ್ಧ ಗಂಟೆಯಾದರೂ ರೆಸ್ಟೋರೆಂಟ್ ಸಿಬ್ಬಂದಿ ಪಾರ್ಸೆಲ್ ಕೊಟ್ಟಿರಲಿಲ್ಲ. ಇದನ್ನು ಪ್ರಶ್ನಿಸಿದ್ದ ಡೆಲಿವರಿ ಬಾಯ್ಗೆ ರೆಸ್ಟೋರೆಂಟ್ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ
ಹಲ್ಲೆಗೊಳಗಾದ ಡೆಲಿವರಿ ಬಾಯ್ ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ. ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.