ಬೆಂಗಳೂರು:- ಮೈಕ್ರೋ ಫೈನಾನ್ಸ್ನವರು ರೌಡಿಗಳನ್ನಿಟ್ಟುಕೊಂಡು ಹಣ ವಸೂಲಿ ಮಾಡ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
Maha Kumbh: ಕುಂಭ ಮೇಳದ ನಂತರ ನಾಗಸಾಧುಗಳು ಎಲ್ಲಿ ಹೋಗ್ತಾರೆ? ಈ ಸನ್ಯಾಸಿಗಳ ನಿಗೂಢ ವಿಚಾರ ನಿಮಗೆಷ್ಟು ಗೊತ್ತು?
ಈ ಸಂಬಂಧ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಂಪನಿಗಳು ಕುರುಕುಳ ನೀಡದಂತೆ ಸಿಎಂ ಹಾಗೂ ಸಹಕಾರ ಸಚಿವರು ಈಗಾಗಲೇ ಆದೇಶ ಮಾಡಿದ್ದಾರೆ. ಆದ್ರೆ ಕೆಲವು ಕಡೆ ರೌಡಿಗಳನ್ನ ಬಿಟ್ಟು ಹೆದರಿಸ್ತಾರೆ, ಹಣ ವಸೂಲಿ ಮಾಡ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ಜಾರಿಯಾಗುತ್ತೆ ಸುಗ್ರೀವಾಜ್ಞೆ ಎಂದರು.
ನಾವು ಬಿಲ್ ತರ್ತಿದ್ದೇವೆ. ಮುಖ್ಯಮಂತ್ರಿಗಳಿಗೆ ಆರೋಗ್ಯ ಸರಿಯಿಲ್ಲ. ಒಂದೆರಡು ದಿನ ವಿರಾಮದ ನಂತರ ಬರ್ತಾರೆ. ಆಮೇಲೆ ಸುಗ್ರೀವಾಜ್ಞೆ ಬಗ್ಗೆ ಕ್ರಮ ಜರುಗಿಸ್ತಾರೆ ಎಂದರು.
ಈಗಾಗಲೇ ಸಿಎಂ, ಸಹಕಾರ ಸಚಿವರು ಕಿರುಕುಳ ನೀಡದಂತೆ ಆದೇಶ ಮಾಡಿದ್ದಾರೆ. ಬಡವರನ್ನ ನಾವು ರಕ್ಷಣೆ ಮಾಡಬೇಕು. ಆದ್ರೆ ಕೆಲವು ಕಡೆ ರೌಡಿಗಳನ್ನ ಬಿಟ್ಟು ಹೆದರಿಸ್ತಾರೆ. ಎಲ್ಲ ಪಕ್ಷದ ಕಾರ್ಯಕರ್ತರಿಗೆ ಹೇಳ್ತೇನೆ. ಕಿರುಕುಳ ಗಮನಕ್ಕೆ ತರುವಂತೆ ಮನವಿ ಮಾಡುತ್ತೇನೆ. ಪ್ರತಿ ಜಿಲ್ಲಾ ಕಚೇರಿಗಳಿಗೂ ಈ ಬಗ್ಗೆ ಹೇಳಿದ್ದೇವೆ. ಎಸ್ಪಿಗಳೊಂದಿಗೂ ಸಭೆ ಮಾಡ್ತೇವೆ. ಸುಗ್ರೀವಾಜ್ಞೆ ಆದಷ್ಟು ಬೇಗ ಜಾರಿಯಾಗುತ್ತೆ ಎಂದು ಹೇಳಿದರು.