ಕೋಲಾರ : ದಕ್ಷಿಣ ಭಾರತದ ಶ್ರೀ ಕೃಷ್ಣದೇವರಾಯರ 555ನೇ ಜಯಂತ್ಯೋತ್ಸವವನ್ನು ಕರ್ನಾಟಕ ರಾಜ್ಯ ಬಲಿಜ ಯುವಶಕ್ತಿ ಸಂಘಟನೆ ಹಾಗೂ ಸಮುದಾಯದ ಮುಖಂಡರಿಂದ ಫೆಬ್ರವರಿ 16 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ಬೆಂಗಳೂರಿನ ಕೆ ಆರ್ ಪುರಂ ನ ರಾಜೀವ್ ಗಾಂಧಿ ಆಟದ ಮೈದಾನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮುದಾಯದ ಪ್ರತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಬಲಿಜ ಯುವಶಕ್ತಿ ಗೌರವ ಅಧ್ಯಕ್ಷ ಆರ್ ಸುರೇಂದ್ರ ಬಾಬು ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯ ನಂತರ ಶ್ರೀ ಕೃಷ್ಣದೇವರಾಯರ ಜಯಂತ್ಯೋತ್ಸವದ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಬಲಿಜ ಸಮುದಾಯದ ನಾನಾ ಬೇಡಿಕೆಗಳ ಈಡೇರಿಕೆಯ ಚರ್ಚೆಗೂ ಸಹ ಆದ್ಯತೆಯಾಗಿದೆ ಎಂದರು.
ರಾಜ್ಯ ಸರ್ಕಾರ ಶ್ರೀ ಯೋಗಿ ನಾರಾಯಣ ಯತೀಂದ್ರ ಕೈವಾರ ತಾತಯ್ಯನವರ ಅಧ್ಯಯನ ಪೀಠ ಪ್ರಾರಂಭ ಮಾಡಬೇಕು, ಜೊತೆಯಲ್ಲಿ ಶ್ರೀ ಕೃಷ್ಣದೇವರಾಯರ ಸ್ವಸಜ್ಯತವಾದ ಅಧ್ಯಯನ ಪೀಠ, ಮತ್ತು ಆಧುನಿಕ ಮ್ಯೂಸಿಯಂ ಹಾಗೂ ನೂರೆಂಟು ಅಡಿ ಎತ್ತರದ ಶ್ರೀ ಕೃಷ್ಣದೇವರಾಯರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಒತ್ತಾಯ ಮಾಡಿದರು.