ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು 150 ರನ್ಗಳ ಅಂತರದಿಂದ ಸೋಲಿಸಿದೆ. ಅಭಿಷೇಕ್ ಶರ್ಮಾ ಅವರ 135 ರನ್ಗಳ ಅದ್ಭುತ ಇನ್ನಿಂಗ್ಸ್ನಿಂದ ಭಾರತ 247 ರನ್ಗಳನ್ನು ಗಳಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 97 ರನ್ಗಳಿಗೆ ಆಲೌಟ್ ಆಯಿತು. ಅಭಿಷೇಕ್ ಶರ್ಮಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಈ ಜಯದೊಂದಿಗೆ ಭಾರತ ಸರಣಿಯನ್ನು ಗೆದ್ದುಕೊಂಡಿತು.
ಇನ್ನೂ ಈ ಗೆಲುವಿಗೆ ಸಂಬಂಧ ಪಟ್ಟಂತೆ ಗೌತಮ್ ಗಂಭೀರ್ ಮಾತನಾಡಿದ್ದಾರೆ. ಇಂಗ್ಲೆಂಡ್ ಉತ್ತಮ ತಂಡ. ನಾವು ಸೋಲಿಗೆ ಹೆದರುವುದಿಲ್ಲ. ಬದಲಾಗಿ ನಿಯಮಿತವಾಗಿ 250-260 ರನ್ಗಳಿಸಲು ಪ್ರಯತ್ನಿಸಲು ಬಯಸುತ್ತೇವೆ. ಇಂತಹ ಪ್ರಯತ್ನದ ನಡುವೆ ಕೆಲವೊಮ್ಮೆ 120-130 ರನ್ಗಳಿಗೆ ಆಲೌಟ್ ಆಗಬಹುದು. ಇದಾಗ್ಯೂ ನಾವು ಸರಿಯಾದ ಹಾದಿಯಲ್ಲಿದ್ದೇವೆ. ನಾವು ಅದನ್ನೇ ಮುಂದುವರಿಸುತ್ತೇವೆ. ನಮ್ಮ ನಿರ್ಭೀತ ಕ್ರಿಕೆಟ್ ಮುಂದುವರೆಯಲಿದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
Remedies For Corns: ಕಾಲಿನಲ್ಲಿ ಉಂಟಾಗುವ ಆಣಿಗಳಿಗೆ ಇಲ್ಲಿದೆ ಮನೆಮದ್ದುಗಳು..! ಒಮ್ಮೆ ಟ್ರೈ ಮಾಡಿ
ಇನ್ನು 5ನೇ ಟಿ20 ಪಂದ್ಯದಲ್ಲಿ 54 ಎಸೆತಗಳಲ್ಲಿ 13 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 135 ರನ್ ಬಾರಿಸಿದ ಅಭಿಷೇಕ್ ಶರ್ಮಾ ಅವರ ಇನಿಂಗ್ಸ್ ಅನ್ನು ಹಾಡಿ ಹೊಗಳಿದ ಗಂಭೀರ್, ನಾವು ಇಂತಹ ಆಟಗಾರರ ಮೇಲೆ ನಂಬಿಯಿಡಬೇಕು. ಏಕೆಂದರೆ ತಂಡದ ಹೆಚ್ಚಿನ ಆಟಗಾರರು ಆಕ್ರಮಣಕಾರಿಯಾಗಿ ಆಡುವುದನ್ನು ನಂಬುತ್ತಾರೆ. ಇಂತಹ ಆಟಗಳಿಂದ ಮಾತ್ರ ಬಲಿಷ್ಠ ತಂಡಗಳ ವಿರುದ್ಧ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.