ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮೀತಿಮೀರಿದೆ. ಎಷ್ಟೇ ಕಾನೂನು ಕ್ರಮಕೈಗೊಂಡರೂ ಇದಕ್ಕೆ ಬ್ರೇಕ್ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ದುಷ್ಕರ್ಮಿಗಳು ಫ್ರೀಯಾಗಿ ಸಿಗರೇಟ್ ಕೊಡದಿದ್ದಕ್ಕೆ ಬೇಕರಿ ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಿದರಕಲ್ಲು ಗ್ರಾಮದ ರಾಘವೇಂದ್ರ ಬೇಕರಿಯಲ್ಲಿ ಘಟನೆ ನಡೆದಿದ್ದು,
ಬೇಕರಿ ಮಾಲೀಕ ಮಂಜಯ್ಯ ಶೆಟ್ಟಿ ಹಲ್ಲೆಗೊಳಗಾಗಿದ್ದಾರೆ. ಭಾನುವಾರ ರಾತ್ರಿ 9:20ರ ಸುಮಾರಿಗೆ ಬೇಕರಿ ಮುಚ್ಚುವ ಸಮಯಕ್ಕೆ ರೌಡಿಗಳ ಗುಂಪೊಂದು ಬಂದಿದೆ. ಬೇಕರಿ ಬಳಿ ಬಂದು ಟೀ, ಸಿಗರೇಟು ಇನ್ನಿತರ ವಸ್ತುಗಳನ್ನ ಫ್ರೀಯಾಗಿ ನೀಡುವಂತೆ ಗಲಾಟೆ ಮಾಡಿ, ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
Remedies For Corns: ಕಾಲಿನಲ್ಲಿ ಉಂಟಾಗುವ ಆಣಿಗಳಿಗೆ ಇಲ್ಲಿದೆ ಮನೆಮದ್ದುಗಳು..! ಒಮ್ಮೆ ಟ್ರೈ ಮಾಡಿ
ಹಲ್ಲೆ ಮಾಡುವ ದೃಶ್ಯ ಬೇಕರಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲ್ಲೆಗೊಳಗಾದ ಬೇಕರಿ ಮಾಲೀಕ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸದ್ಯ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಪದೇ ಪದೇ ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ಕಾಂಡಿಮೆಟ್ಸ್ ಅಂಗಡಿಗಳಿಗೆ ನುಗ್ಗಿ ದಾಂಧಲೆ ನಡೆಸುವ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಆದರೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಗ್ರಹಿಸಿದ್ದಾರೆ.