ನವದೆಹಲಿ: ಅಮೇರಿಕಾ ವಿರುದ್ಧ ಕೆನಡಾ ತಿರುಗಿ ಬಿದಿದ್ದು ಶೇ.26 ರಷ್ಟು ಸುಂಕ ವಿಧಿಸಿದೆ. ಈ ಕುರಿತು ಪೋಸ್ಟ್ ಮಾಡಿರುವ ಟ್ರೂಡೊ, ನಮಗೆ ಇದು ಬೇಕಾಗಿಲ್ಲ, ಆದರೆ ಕೆನಡಾ ಸಿದ್ಧವಾಗಿದೆ” ಎಂಬುದನ್ನು ತಿಳಿಸಲು ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಸುಂಕ, ತೆರಿಗೆಗಳ ವಿಷಯದ ಬಗ್ಗೆ ಚರ್ಚಿಸಲು ತಾವು ಪ್ರಧಾನಿಗಳು ಮತ್ತು ಸಂಪುಟವನ್ನು ಭೇಟಿಯಾಗಿದ್ದಾಗಿ ಮತ್ತು ಶೀಘ್ರದಲ್ಲೇ ಮೆಕ್ಸಿಕೊ ಅಧ್ಯಕ್ಷ ಶೀನ್ಬಾಮ್ ಅವರೊಂದಿಗೆ ಮಾತನಾಡುವುದಾಗಿ ಟ್ರುಡೋ ತಿಳಿಸಿದ್ದಾರೆ.
‘ಫೆಬ್ರವರಿ 4 ರಿಂದ ಪ್ರಾರಂಭವಾಗುವ ಹೆಚ್ಚಿನ ಕೆನಡಾದ ಸರಕುಗಳ ಮೇಲೆ ಶೇ.25 ರಷ್ಟು ಸುಂಕವನ್ನು ವಿಧಿಸಲು ಉದ್ದೇಶಿಸಿರುವುದಾಗಿ ಅಮೆರಿಕ ದೃಢಪಡಿಸಿದೆ, ಇಂಧನದ ಮೇಲೆ ಶೇಕಡಾ 10 ರಷ್ಟು ಸುಂಕವನ್ನು ವಿಧಿಸಲಾಗುವುದು ಎಂದು ಅಮೇರಿಕ ಹೇಳಿದೆ.
ನಾನು ಇಂದು ಪ್ರಧಾನಿಗಳು ಮತ್ತು ನಮ್ಮ ಸಂಪುಟವನ್ನು ಭೇಟಿ ಮಾಡಿದ್ದೇನೆ ಮತ್ತು ನಾನು ಶೀಘ್ರದಲ್ಲೇ ಮೆಕ್ಸಿಕೊ ಅಧ್ಯಕ್ಷ ಶೀನ್ಬಾಮ್ ಅವರೊಂದಿಗೆ ಮಾತನಾಡುತ್ತೇನೆ‘ ಎಂದು ಟ್ರುಡೋ ಹೇಳಿದ್ದಾರೆ.