ಬೆಂಗಳೂರು: ಭಾರತದಲ್ಲಿನ ಪ್ರತಿಯೊಂದು ಮನೆಯಲ್ಲಿಯೂ ಸಂಪತ್ತಾಗಿ ಚಿನ್ನದ ನಾಣ್ಯ ಅಥವಾ ಆಭರಣವನ್ನು ಇಟ್ಟುಕೊಳ್ಳುತ್ತಾರೆ. ಹಣಕ್ಕಿಂತ ಹೆಚ್ಚು ಚಿನ್ನವನ್ನು ಉಳಿತಾಯವಾಗಿ ನೋಡಲಾಗುತ್ತದೆ. ‘ಸುರಕ್ಷಿತ’ ಸ್ವತ್ತು ಎಂದು ಪ್ರಶಂಸಿಸಲ್ಪಟ್ಟ ಚಿನ್ನವು ಅದರ ಬೆಲೆಗಳಲ್ಲಿ ಗಮನಾರ್ಹವಾದ ಏರಿಕೆಯನ್ನು ಕಾಣುತ್ತಲೇ ಇದೆ. ವಿಶೇಷವಾಗಿ ಹೂಡಿಕೆದಾರರು ಮತ್ತು ಹಣಕಾಸು ವಿಶ್ಲೇಷಕರ ಗಮನವನ್ನು ಸೆಳೆದಿದೆ.
ವರ್ಷಗಳಲ್ಲಿ ಚಿನ್ನದ ಬೆಲೆಯು ದೊಡ್ಡ ಮಟ್ಟದಲ್ಲಿ ಏರಿಳಿತವಾಗಿದೆ. ಆರ್ಥಿಕ ಅಸ್ಥಿರತೆ, ಸಾಮಾಜಿಕ ಅಶಾಂತಿ ಅಥವಾ ಯಾವುದೇ ರೀತಿಯ ಆರ್ಥಿಕ ಅನಿಶ್ಚಿತತೆ ಉಂಟಾದಾಗ, ಅಂತಹ ಸಮಯದಲ್ಲಿ ಚಿನ್ನದ ಬೆಲೆ ಸಾಮಾನ್ಯವಾಗಿ ಏರುತ್ತದೆ. ಇಷ್ಟೇ ಅಲ್ಲ ದಿನವೂ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿಯ ದರ ಬದಲಾಗುತ್ತಿರುತ್ತದೆ. ಹಾಗಿದ್ರೆ ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಚಿನ್ನದ ಬೆಲೆ ನೋಡೋಣ.
Monday Remedy: ಸೋಮವಾರದಂದು ಈ 5 ಕೆಲಸಗಳನ್ನು ಮಾಡಿದರೆ ಶ್ರೀಮಂತರಾಗೋದು ಖಚಿತ..!
ಆಭರಣ ಚಿನ್ನದ ಬೆಲೆ ಗ್ರಾಮ್ಗೆ 40 ರೂನಷ್ಟು ಕಡಿಮೆ ಆಗಿದೆ. 7,745 ರೂ ಇದ್ದ ಅದರ ಬೆಲೆ 7,705 ರೂಗೆ ಇಳಿದೆ. ಅಪರಂಜಿ ಚಿನ್ನದ ಬೆಲೆ 8,405 ರೂ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 6,304 ರೂಗೆ ಕುಸಿದಿದೆ. ವಿದೇಶಗಳಲ್ಲಿ ಬೆಲೆ ವ್ಯತ್ಯಯವಾಗಿಲ್ಲ. ಭಾರತದಲ್ಲಿ ಮಾತ್ರವೇ ಹಳದಿ ಲೋಹದ ಬೆಲೆ ತಗ್ಗಿರುವುದು. ಬಜೆಟ್ನಲ್ಲಿ ಆಭರಣ ಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡಿರುವುದರ ಪರಿಣಾಮ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗುವ ನಿರೀಕ್ಷೆ ಇತ್ತು.
ಇದೇ ವೇಳೆ, ಬೆಳ್ಳಿ ಬೆಲೆ ಮತ್ತೆ ತನ್ನ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 77,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 84,050 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,950 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 77,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,950 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 3ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,050 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 84,050 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,040 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,050 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 84,050 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 77,050 ರೂ
- ಚೆನ್ನೈ: 77,050 ರೂ
- ಮುಂಬೈ: 77,050 ರೂ
- ದೆಹಲಿ: 77,200 ರೂ
- ಕೋಲ್ಕತಾ: 77,050 ರೂ
- ಕೇರಳ: 77,050 ರೂ
- ಅಹ್ಮದಾಬಾದ್: 77,100 ರೂ
- ಜೈಪುರ್: 77,200 ರೂ
- ಲಕ್ನೋ: 77,200 ರೂ
- ಭುವನೇಶ್ವರ್: 77,050 ರೂ