ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಹಿರೇಮಠ ಕೊಲೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಈ ಕೊಲೆ ಹಿಂದೆ ಲವ್ ಜಿಹಾದ್ ಇದೆ ಅಂತ ನೇಹಾ ತಂದೆ ನಿರಂಜನ ಹಿರೇಮಠ, ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ರಾಜ್ಯವ್ಯಾಪಿ ಪ್ರತಿಭಟನೆ ಮಾಡಿದ್ದವು. ಆದ್ರೆ ಇನ್ನೂ ಸಹ ನೇಹಾ ಹಿರೇಮಠ ಹಂತಕನಿಗೆ ಶಿಕ್ಷೆಯಾಗಿಲ್ಲ, ಆದ್ದರಿಂದ ನೇಹಾರ ತಂದೆ ನಿರಂಜನ್ ಹಿರೇಮಠ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ಹೌದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೇಹಾ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ನನ್ನ ಮಗಳ ಹತ್ಯೆ ನಡೆದು 9 ತಿಂಗಳು ಕಳೆದರೂ ನ್ಯಾಯ ಸಿಗುತ್ತಿಲ್ಲ. ಈ ತನಿಖೆಯ ಹಾದಿ ಎತ್ತ ಸಾಗುತ್ತಿದೆ ಅನ್ನೋದೇ ಗೊತ್ತಾಗುತ್ತಿಲ್ಲ.
Monday Remedy: ಸೋಮವಾರದಂದು ಈ 5 ಕೆಲಸಗಳನ್ನು ಮಾಡಿದರೆ ಶ್ರೀಮಂತರಾಗೋದು ಖಚಿತ..!
ಹತ್ಯೆ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ. ಈ ಪ್ರಕರಣದ ತನಿಖೆಯ ಬಗ್ಗೆ ಶ್ರೀರಾಮಸೇನೆ ಅಷ್ಟೇ ಅಲ್ದೇ ಸಾರ್ವಜನಿಕರಲ್ಲಿಯೂ ಹಲವು ಪ್ರಶ್ನೆ ಮೂಡಿಸಿದೆ. ಆದ್ದರಿಂದ ಸಿಬಿಐ ತನಿಖೆ ಆಗಲಿ ಎಂದಿದ್ದಾರೆ. ಕೊಲೆ ಕೇಸ್ನಲ್ಲಿ ಶಾಸಕರ ಕೈವಾಡ ಇರುವುದು ಸತ್ಯ ಎಂದು ಕಣ್ಣೀರು ಹಾಕಿದ್ದಾರೆ.