ರಾಮನಗರ: ಕೃತಜ್ಞತಾ ಸಮಾವೇಶದ ಬಳಿಕ ಚನ್ನಪಟ್ಟಣ ಕಣ್ವಜಲಾಶಯ ವೀಕ್ಷಣೆ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಕಣ್ಣಿಗೆ ಗಾಗಲ್ ಹಾಕಿ, ಬೋಟ್ನಲ್ಲಿ ಫುಲ್ ಮಿಂಚಿದ್ದಾರೆ. ಡಿಕೆ ಶಿವಕುಮಾರ್ ಜತೆ ಶಾಸಕ ಸಿಪಿ ಯೋಗೇಶ್ವರ್ ಪಂಚೆಯಲ್ಲಿಯೇ ರೈಡ್ ಮಾಡಿದ್ದಾರೆ. ಮಾಜಿ ಸಂಸದ ಡಿಕೆ ಸುರೇಶ್ ಕೂಡ ಬೋಟ್ ರೈಡ್ ಮಾಡಿದ್ದಾರೆ.
ಈ ವೇಳೆ ಕಣ್ವ ಜಲಾಯಶಯದಲ್ಲಿ ವಾಟರ್ ಬೈಕ್ ರೈಡಿಂಗ್ ವೇಳೆ ಡಿಕೆ ಸುರೇಶ್ ಹಾಗೂ ಸಿಪಿ ಯೋಗೇಶ್ವರ್ ಇಬ್ಬರೂ ನೀರಿಗೆ ಬಿದ್ದ ಘಟನೆ ನಡೆದಿದೆ. ಒಂದೇ ವಾಟರ್ ಬೈಕ್ನಲ್ಲಿ ಇಬ್ಬರೂ ರೈಡ್ ಮಾಡುತ್ತಿದ್ದರು. ಡಿಕೆ ಸುರೇಶ್ ಮುಂದೆ ಕುಳಿತು ವಾಟರ್ ಬೈಕ್ ಓಡಿಸ್ತಿದ್ರೆ, ಸಿಪಿ ಯೋಗೇಶ್ವರ್ ಇದೇ ವಾಟರ್ ಬೈಕ್ನಲ್ಲಿ ಅವರ ಹಿಂದೆ ಕುಳಿತಿದ್ದರು. ಈ ವೇಳೆ ಈ ಘಟನೆ ನಡೆದಿದೆ.
Monday Remedy: ಸೋಮವಾರದಂದು ಈ 5 ಕೆಲಸಗಳನ್ನು ಮಾಡಿದರೆ ಶ್ರೀಮಂತರಾಗೋದು ಖಚಿತ..!
ವಾಟರ್ ಬೈಕ್ ರೈಡ್ ಮಾಡುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿದೆ. ಆಗ ಆಯತಪ್ಪಿ ಮುಂದೆ ಕುಳಿತಿದ್ದ ಡಿಕೆ ಸುರೇಶ್ ಹಾಗೂ ಹಿಂದೆ ಕುಳಿತಿದ್ದ ಸಿಪಿ ಯೋಗೇಶ್ವರ್ ನೀರಿನಲ್ಲಿ ಬಿದ್ದಿದ್ದಾರೆ. ಕೂಡಲೇ ಇಬ್ಬರೂ ನಾಯಕರು ಈಜಿ ದಡಸೇರಿದ್ದಾರೆ.