ಬೆಂಗಳೂರು:- ರಾಜ್ಯದ ಹಲವೆಡೆ ಗರಿಷ್ಠ ತಾಪಮಾನ ಏರಿಕೆ ಕಂಡಿದ್ದು, ಮುಂಬರುವ ಬೇಸಿಗೆ ಜನರನ್ನು ಹೈರಾಣಾಗಿಸುತ್ತ ಎಂಬ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಚಳಿಗಾಲ ಮುಗಿಯುವ ಮುನ್ನವೇ ಅನೇಕ ಕಡೆ ಬೇಸಿಗೆ ಆರಂಭವಾದ ಅನುಭವ ಆಗುತ್ತಿದೆ.
2025ರ ಕೇಂದ್ರ ಬಜೆಟ್ ಕರ್ನಾಟಕಕ್ಕೆ ಕರಾಳವಾಗಿದೆ: ಸಚಿವ ಎಚ್ ಕೆ ಪಾಟೀಲ್ ವ್ಯಂಗ್ಯ!
ಕಳೆದ ಬಾರಿ ಬೇಸಿಗೆ ಹೊಡೆತದ ಎಫೆಕ್ಟ್ನ್ನು ಜನ ಇನ್ನೂ ಮರೆತಿಲ್ಲ. ಅದರಲ್ಲೂ ಬೆಂಗಳೂರಿನ ಜನರಿಗೆ ಈಗಲೂ ಸಹ ಅಕ್ಷರಶಃ ಒಮ್ಮೆ ಆ ದಿನಗಳನ್ನು ನೆನೆದರೆ ಗಾಬರಿಯಾಗುತ್ತಾರೆ. ಈ ಮಧ್ಯೆ ಈ ಬಾರಿ ಉತ್ತಮ ಮಳೆಯಾಗಿದೆ, ಎಲ್ಲವು ಸರಿಹೋಗಬಹುದು ಅನ್ನುವಷ್ಟರಲ್ಲೇ ಮುಂಬರುವ ಬೇಸಿಗೆ ದಿನಗಳ ಬಗ್ಗೆ ಹವಾಮಾನ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಬೇಸಿಗೆ ಅನುಭವ ಆರಂಭವಾಗಿದೆ. ಗರಿಷ್ಠ ಉಷ್ಣಾಂಶ ಗಮನಾರ್ಹ ಏರಿಕೆ ಕಂಡಿದೆ. ಪರಿಣಾಮ ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೇಸಿಗೆ ಬಿಸಿಲಿನ ಝಳದಂತೆ ಸೂರ್ಯನ ಶಾಖದ ಅನುಭವ ಆಗತೊಡಗಿದೆ. ಬೆಳ್ಳಂಬೆಳಗ್ಗೆ ಚಳಿ ಕೊಂಚ ಹೆಚ್ಚಾಗಿಯೇ ಕಾಡಿದರು, ಮಧ್ಯಾಹ್ನವಾಗ್ತಿದ್ದಂತೆ ಸೂರ್ಯನ ಅಬ್ಬರ ಶುರುವಾಗುತ್ತಿದೆ.
ಸದ್ಯದ ಪರಿಸ್ಥಿತಿ ಜೊತೆಗೆ ಹವಾಮಾನದ ಏರಿಳಿತದ ಮೂನ್ಸೂಚನೆ ಹಿನ್ನೆಲೆ, ಈ ಬಾರಿ ಮಾರ್ಚ್ನಿಂದಲೇ ಬೇಸಿಗೆ ಸುಡುಬಿಸಿಲಿನಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಸುಮಾರು ಮಾರ್ಚ್ನಲ್ಲೇ 29 ಡಿಗ್ರಿ ಸೆಲ್ಸಿಯಸ್ವರೆಗೂ ಬಿಸಿಲು ಇರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ್ ತಿಳಿಸಿದ್ದಾರೆ