ವಿಜಯಪುರ:- ಮಾಜಿ ಉಪಮುಖ್ಯ ಮಂತ್ರಿ ಕೆ ಎಸ್ ಈಶ್ವರಪ್ಪ ನೇತೃತ್ವದ ಕ್ರಾಂತಿವೀರ ಬ್ರಿಗೇಡ್ ಗೆ ದಿನಗಣನೆ ಆರಂಭವಾಗಿದೆ ಈ ಕುರಿತು ಕಂಪ್ಲಿಟ್ ಡಿಟೇಲ್ಸ ಇಲ್ಲಿದೆ ನೋಡಿ
ಹೌದು !
ಮಂಗಳೂರು: ವೈರಲ್ ಆಯಿತು ಯಕ್ಷಗಾನ ಪ್ರದರ್ಶನದ ಹಳೆಯ ಪ್ರಚಾರ ಶೈಲಿಯ ವೀಡಿಯೋ!
ಕ್ರಾಂತಿ ಪುರುಷ ವಿಶ್ವಗುರು ಬಸವೇಶ್ವರ ಜನ್ಮ ಸ್ಥಳ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಫೆ,4 ರಂದು ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೊಳ್ಳಲಿದೆ ಈ ಹಿನ್ನೆಲೆಯಲ್ಲಿ ಪಟ್ಟಣದ ಗುರುಕೃಪ ಶಾಲೆ ಪಕ್ಕದ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ ಅಲ್ಲದೇ ಬಸವನಬಾಗೇವಾಡಿ ಪಟ್ಟಣ ಮದುವಣ ಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ.
ಕ್ರಾಂತಿವೀರ ಬ್ರಿಗೇಡ್ ರಾಜ್ಯಾಧ್ಯಕ್ಷ:
ಇನ್ನೂ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಕಡೆಗಳಲ್ಲಿ ಕೆಸರಿ ಬಟ್ಟೆಯಿಂದ ಸ್ವಾಗತ ಕಮಾನುಗಳನ್ನ ಮಾಡಲಾಗಿದ್ದು ವಿವಿಧ ಮುಖಂಡರ ಸ್ವಾಗತ ಕೋರುವ ಬ್ಯಾನರ್ ಗಳು ಸಾರ್ವಜನಿಕರನ್ನ ಕೈಬಿಸಿ ಕರೆಯುತ್ತಿವೆ. ಇನ್ನೂ ಕಾರ್ಯಕ್ರಮದಲ್ಲಿ ವಿಶೇಷವಾಗಿ 1008 ಮಠಾಧೀಶರ ಪಾದಪೂಜೆಯೊಂದಿಗೆ ಕ್ರಾಂತಿವೀರ ಬ್ರಿಗೇಡ್ ಲೋಕಾರ್ಪಣೆಗೊಳ್ಳಲಿದ್ದು ಹಿಂದೂ ಧರ್ಮ ಜಾಗೃತೆಗಾಗಿ ಬ್ರಿಗೇಡ್ ತಲೆ ಎತ್ತುತ್ತಿದೆ ಎನ್ನುವದು ಕ್ರಾಂತಿವೀರ ಬ್ರಿಗೇಡ್ನ ಗೋಷವಾಕ್ಯವಾಗಿದೆ.
ಒಟ್ಟಾರಿಯಾಗಿ ಕ್ರಾಂತಿಪುರುಷರ ನೆಲದಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೆ ಸಕಲ ಸಿದ್ದತೆಯನ್ನ ಮಾಡಿಕೊಳ್ಳಲಾಗಿದೆ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಅಧಿಕ ಜನ ಸೇರುವ ನೀರಿಕ್ಷೆ ಇದ್ದು ಕಾರ್ಯಕ್ರಮ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಎನ್ನುವುದನ್ನ ಕಾದು ನೋಡಬೇಕಿದೆ.