ಗದಗ : ಅಧಿಕಾರಿ ಹಂಚಿಕೆ ಚರ್ಚೆಯ ನಡುವೆಯೇ ಹೆಚ್ ಕೆ ಪಾಟೀಲರಿಗೆ ಮುಖ್ಯಮಂತ್ರಿ ಯೋಗ ಕೂಡಿ ಬರಲಿ ಎಂದು ಭೋವಿ ಗುರುಪೀಠ ಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಗದಗನಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವ್ರು, ಸಚಿವ ಎಚ್ ಕೆ ಪಾಟೀಲರಿಗೆ ಸಿಎಂ ಯೋಗ ಇತ್ತು. ಹೆಚ್.ಕೆ.ಪಾಟೀಲರು ಎರಡು ಮೂರು ಬಾರಿ ಸಿಎಂ ಆಗಿರುತ್ತಿದ್ದರು. ಎಸ್.ಎಂ.ಕೃಷ್ಣ ಆದ್ಮೇಲೆ ಸಿಎಂಗಾಗಿ ಹೆಸರು ಓಡಿದ್ದು ಎಚ್ ಕೆ ಪಾಟೀಲರದ್ದೇ. ತಡವಾಗಿಯಾದ್ರೂ ಹೆಚ್ ಕೆ ಪಾಟೀಲರಿಗೆ ಸಿಎಂ ಯೋಗ ಕೂಡಿ ಬರಲಿ ಎಂದಿದ್ದಾರೆ.