ಚಿಕ್ಕಬಳ್ಳಾಪುರ: ಮೊನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ದ ಭಾರೀ ಗುಡುಗಿದ್ದ ಚಿಕ್ಕಬಳ್ಳಾಪುರ ಸಂಸದ ಕೆ.ಸುಧಾಕರ್, ಇಂದು ಸಿಎಂ ಸಿದ್ದರಾಮಯ್ಯ ರನ್ನು ಹಾಡಿ ಹೊಗಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಹೊಸೂರು ಗ್ರಾಮದಲ್ಲಿ ಡಾ. ಹೆಚ್ ನರಸಿಂಹಯ್ಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಡೆಯಿತು. ಈ ವೇಳೆ ವೇದಿಕೆಯ ಮೇಲೆ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯರನ್ನು ಹಾಡಿಹೊಗಳಿದ್ದಾರೆ.
ತಮ್ಮ ಕಾರ್ಯಕ್ರಮದುದ್ದಕ್ಕೂ ಸಿದ್ದು ಗುಣಗಾನ ಮಾಡಿದ ಸಂಸದ ಕೆ.ಸುಧಾಕರ್, ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆದರೂ ಅವರು ತುಂಬಾ ಸಿಂಪಲ್ ಮ್ಯಾನ್. ಸಿಎಂ ಆದರೂ ಈಗಲೂ ಪಂಚೆ ಕುರ್ತಾ ಅಷ್ಟೇ. ಅವರು ತುಂಬಾ ಸಿಂಪ್ಲಿಸಿಟಿ ಮನುಷ್ಯ. ಡಾ. ಹೆಚ್ ನರಸಿಂಹಯ್ಯ ಅವರ ರೀತಿಯೇ ಸಿದ್ದರಾಮಯ್ಯ ಎಂದರು.
ಇನ್ನೂ ಇದೇ ವೇಳೆ ಇದೇ ವೇದಿಕೆಯಲ್ಲಿ ಬದ್ಧ ವೈರಿಗಳು ಸಹ ಒಂದಾಗಿದ್ದ ಘಟನೆಯೂ ನಡೆಯಿತು. ಸಚಿವ ಎಂ.ಸಿ ಸುಧಾಕರ್ , ಸಂಸದ ಕೆ ಸುಧಾಕರ್ ವೈಮನಸ್ಯ ಮರೆತು ಮಾತುಕತೆ ನಡೆಸಿದ್ದು, ವೇದಿಕೆಯಲ್ಲಿ ನಗಾಡಿಕೊಂಡಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರು ಇಬ್ಬರನ್ನೂ ನೋಡಿ ದಂಗಾಗಿದ್ದಾರೆ.