ಬೆಂಗಳೂರು:- ಆಕೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಾ ಕುಟುಂಬ ನಡೆಸ್ತಿದ್ಳು..ಮದುವೆ ಸಮಾರಂಭವೊಂದಕ್ಕೆ ಹೋಗಿ ಸಹೋದರನ ಜೊತೆ ಬೈಕ್ ನಲ್ಲಿ ಬರ್ತಿದ್ಳು..ಆದ್ರೆ ತನ್ನದ್ದಲ್ಲದ ತಪ್ಪಿಗೆ ಪ್ರಾಣ ಬಿಟ್ಟಿದ್ದಾಳೆ..ಯಮ ಸ್ವರೂಪಿ ಬಿಎಂಟಿಸಿ ಬಸ್ ಗೆ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಲಿಯಾಗಿದೆ
ಕುಡಿದ ಮತ್ತಿನಲ್ಲಿ ರೈಲ್ವೆ ಫ್ಲಾಟ್ಫಾರ್ಮ್ ಮೇಲೆ ಕಾರು ನುಗ್ಗಿಸಿದ ಭೂಪ
ಹೌದು..ಜನವರಿ 1 ರಂದು ಸಂಜೆ ಸಂಬಂಧಿಯೊಬ್ಬರ ಮದುವೆಗೆ ಬಂದಿದ್ದ ಸರೋಜ ರಾತ್ರಿ 9 ಗಂಟೆ ಸುಮಾರಿಗೆ ಸಹೋದರನ ಜೊತೆಗೆ ಬೈಕ್ ನಲ್ಲಿ ಕಾಮಾಕ್ಷಿಪಾಳ್ಯ ಮನೆ ಕಡೆ ತೆರಳಿದ್ರು..ಜ್ಞಾನಭಾರತಿಯಿಂದ ನಾಯಂಡಹಳ್ಳಿ ಮಾರ್ಗವಾಗಿ ಕಾಮಾಕ್ಷಿಪಾಳ್ಯ ಕಡೆಗೆ ಹೊರಟಿದ್ರು..ಈ ವೇಳೆ ರಸ್ತೆಯಲ್ಲಿ ಬರ್ತಿರಬೇಕಾದ್ರೆ ನಾಯಂಡಹಳ್ಳಿ ಸಮೀಪ ಸೈಡ್ ನಲ್ಲಿ ಪಾರ್ಕ್ ಮಾಡಿದ್ದ ಕಾರಿನ ಡೋರ್ ಅನ್ನ ಸಡನ್ ಆಗಿ ತೆಗೆದಿದ್ದಾರೆ..ಹತ್ತಿರದಲ್ಲೇ ಬರ್ತಿದ್ದ ಬೈಕ್ ಸವಾರ ಬ್ರೇಕ್ ಹಾಕಿದ್ದಾನೆ..ಇದರಿಂದಾಗಿ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಸರೋಜ ಜಾರಿ ಕೆಳಗೆ ಬಿದ್ದಿದ್ದಾಳೆ.. ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ಮಹಿಳೆ ಮೇಲೆ ಹರಿದಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ..ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಬ್ಯಾಟರಾಯನಪುರ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಇತ್ತ ಸರೋಜ ಪತಿ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ..ಮಗ ಕೂಡ ಇತ್ತೀಚೆಗಷ್ಟೇ ಪದವಿ ಮುಗಿಸಿದ್ದ..ಮನೆಯಲ್ಲೇ ಇದ್ದ ಸರೋಜ ಗಾರ್ಮೆಂಟ್ಸ್ ಬಟ್ಟೆ ಮನೆಗೆ ತಂದು ಪೀಸ್ ವರ್ಕ್ ಮಾಡ್ತಿದ್ಳು..ಹೇಗೊ ಕಷ್ಟ ಪಟ್ಟು ಜೀವನದ ಬಂಡಿ ಸಾಗಿಸ್ತಿದ್ಳು..ಆದ್ರೆ ಮಹಿಳೆಯ ಆಕಸ್ಮಿಕ ಸಾವು ಕುಟುಂಬಸ್ಥರು ಕಣ್ಣೀರು ಹಾಕುವಂತೆ ಮಾಡಿದೆ.
ಪ್ರಕರಣ ದಾಖಲಿಸಿಕೊಂಡಿರೊ ಬ್ಯಾಟರಾಯನಪುರ ಸಂಚಾರಿ ಪೊಲೀಸರು ತನಿಖೆ ನಡೆಸ್ತಿದ್ದಾರೆ.ತನಿಖೆ ವೇಳೆ ಕಾರು ಚಾಲಕ ಹಾಗೂ ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆ ದೃಢಪಟ್ಟಿದೆ..ಅದೇನೆ ಹೇಳಿ ತನ್ನ ಪಾಡಿಗೆ ತಾನು ಹೋಗ್ತಿದ್ದ ಮಹಿಳೆ ತನ್ನದ್ದಲ್ಲದ ತಪ್ಪುಗೆ ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿರೋದು ನಿಜಕ್ಕೂ ವಿಪರ್ಯಾಸ..