ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ತನ್ನ ವಿಶೇಷ ಕಣ್ಣುಗಳಿಂದ ವೈರಲ್ ಆಗಿದ್ದ 16 ವರ್ಷದ ಮೊನಾಲಿಸಾಗೆ ಈಗ ಸಿನಿಮಾದಲ್ಲಿ ಕೆಲಸ ಮಾಡುವ ಆಫರ್ ಬಂದಿದೆ.
Tech Tips: ದಿನಕ್ಕೆ ಎಷ್ಟು ಬಾರಿ ಫೋನ್ ಚಾರ್ಜ್ ಮಾಡ್ಬೇಕು ಗೊತ್ತಾ!? ನೀವು ಈ ತಪ್ಪು ಮಾಡ್ಬೇಡಿ!
2025ರ ಮಹಾ ಕುಂಭಮೇಳದಲ್ಲಿ ತಮ್ಮ ನೇತ್ರಗಳಿಂದಲೇ ಎಲ್ಲರನ್ನೂ ಮೋಡಿ ಮಾಡಿದ್ದ ಮೊನಾಲಿಸಾಗೆ ಅದೃಷ್ಟ ಒದಗಿಬಂದಿದೆ. ಜಪಮಾಲೆಗಳನ್ನು ಮಾರುತ್ತಿದ್ದ ಸಾಮಾನ್ಯ ಹುಡುಗಿ ಮೊನಾಲಿಸಾ ಹೀರೋಯಿನ್ ಆಗಿ ಮಿಂಚಲಿದ್ದಾರೆ. ಹೌದು, ನಿರ್ದೇಶಕ ಸನೋಜ್ ಮಿಶ್ರಾ ಅವರ ‘ದಿ ಡೈರಿ ಆಫ್ ಮಣಿಪುರ’ದಲ್ಲಿ ಚೆಲುವೆ ಮೊನಾಲಿಸಾ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿದ್ದು, ಸಹಿ ಹಾಕಲಾಗಿದೆ. ಬಾಲಿವುಡ್ ನಟ ರಾಜ್ಕುಮಾರ್ ರಾವ್ ಅವರ ಸಹೋದರನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕುಂಭಮೇಳದ ಮೊನಾಲಿಸಾ ಅತೀ ವೇಗದಲ್ಲಿ ಬಾಲಿವುಡ್ ಚಿತ್ರದ ಆಫರ್ ಗಿಟ್ಟಿಸಿಕೊಂಡಿದ್ದಳು. ಡೈರಿ ಆಫ್ ಮಣಿಪುರ ಚಿತ್ರದಲ್ಲಿ ಮೊನಾಲಿಸಾ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಈ ಚಿತ್ರದ ಸಂಭಾವನೆ ಇದೀಗ ಭಾರಿ ಸದ್ದು ಮಾಡುತ್ತಿದೆ.
ಬಾಲಿವುಡ್ ನಟ ರಾಜ್ಕುಮಾರ್ ರಾವ್ ಸಹೋದರ ಅಮಿತ್ ರಾವ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸನೋಜ್ ಮಿಶ್ರಾ ನಿರ್ದೇಶಿಸುತ್ತಿದ್ದಾರೆ. ನಾಯಕಿಯಾಗಿ ಮೊನಾಲಿಸಾ ಭೋಸ್ಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ವೈರಲ್ ವಿಡಿಯೋದಿಂದ ಏಕಾಏಕಿ ಬಾಲಿವುಡ್ ಆಫರ್ ಪಡೆದ ಖ್ಯಾತಿಗೂ ಪಾತ್ರರಾಗಿದ್ದಾಳೆ. ಮಾಧ್ಯಮ ವರದಿಗಳ ಪ್ರಕಾರ, ಮೋನಾಲಿಸಾ ಅವರಿಗೆ ಈ ಚಿತ್ರಕ್ಕೆ 21 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎನ್ನಲಾಗುತ್ತಿದೆ. ಮಹಾಕುಂಭ ಮತ್ತು ಇತರ ಸ್ಥಳಗಳಲ್ಲಿ ರುದ್ರಾಕ್ಷ ಮಾಲೆ ಮಾರುತ್ತಿದ್ದ ಸರಳ ಹುಡುಗಿ ಈಗ ತನ್ನ ಮೊದಲ ಚಿತ್ರದ ಮೂಲಕ ಬಾಲಿವುಡ್ಗೆ ಭರ್ಜರಿ ಪ್ರವೇಶ ಮಾಡಲಿದ್ದಾರೆ. ಅಭಿಮಾನಿಗಳು ಅವರ ಚೊಚ್ಚಲ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿರುವ ಮೋನಾಲಿಸಾ ಅವರನ್ನು ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ನಿರ್ದೇಶಕ ಸನೋಜ್ ಮಿಶ್ರಾ ಅವರು ಮೋನಾಲಿಸಾ ಅವರ ಹಳ್ಳಿಗೆ ಹೋಗಿ ತಮ್ಮ ಚಿತ್ರ ‘ಡೈರಿ ಆಫ್ ಮಣಿಪುರ’ಕ್ಕೆ ಆಯ್ಕೆ ಮಾಡಿದ್ದಾರೆ. ಈ ಚಿತ್ರದಲ್ಲಿ ಮೋನಾಲಿಸಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ಅವರಿಗೆ ಮುಂಬೈನಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಈ ಚಿತ್ರಕ್ಕಾಗಿ ತಾನು ಶ್ರಮಿಸುವುದಾಗಿ ಮೋನಾಲಿಸಾ ಒಂದು ವಿಡಿಯೋದಲ್ಲಿ ಹೇಳಿದ್ದರು.
ಮಹಾಕುಂಭ ಮೇಳದಲ್ಲಿ ನಷ್ಟ ಮಾಡಿಕೊಂಡಿದ್ದ ಮೊನಾಲಿಸಾ ಇದೀಗ ಅಸಲು ಬಡ್ಡಿ ಸಮೇತ ಸಿನಿಮಾ ಸಂಭಾವನೆ ಮೂಲಕ ಪಡೆದಿದ್ದಾರೆ. ಮೋನಾಲಿಸಾ ಪತ್ರಕರ್ತರ ಜೊತೆ ಮಾತನಾಡಿ, “ಮಹಾಕುಂಭದಲ್ಲಿ ಮಾಲೆ ಮಾರೋ ಬಿಸಿನೆಸ್ ಸರಿಯಾಗಿ ನಡೆಯಲಿಲ್ಲ. 35,000 ರೂಪಾಯಿ ಸಾಲ ಮಾಡಿ ಮನೆಗೆ ವಾಪಸ್ ಬರಬೇಕಾಯ್ತು” ಅಂತ ಹೇಳಿದ್ದರು. ಮಹಾಕುಂಭದಲ್ಲಿ ಮೀಡಿಯಾ ಮತ್ತು ಭಕ್ತರಿಂದ ತೊಂದರೆ ಆಗಿತ್ತು, ಅದಕ್ಕೆ ವಾಪಸ್ ಬರಬೇಕಾಯ್ತು ಎಂದಿದ್ದರು. ಮಾಧ್ಯಮದವರು ಮೋನಾಲಿಸಾರನ್ನು ಪದೇ ಪದೇ ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರಿಂದ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ನಿರಂತರ ತೊಂದರೆ ಮತ್ತು ಅನಾರೋಗ್ಯದಿಂದ ಮನೆಗೆ ವಾಪಸ್ ಬಂದೆ ಅಂತ ಹೇಳಿದ್ದರು.